Thursday, June 25, 2026
Homeಕರಾವಳಿಕಪಿಲಾ ಗೋ ಶಾಲೆ ಉಳಿವಿಗಾಗಿ ಬೇಡಿಕೆ- ನಳಿನ್‌ ಕುಮಾರ್‌ ವಿರುದ್ಧ ಹರಿಹಾಯ್ದ ಶ್ರೀರಿಷಿ ಕುಮಾರ ಸ್ವಾಮೀಜಿ!…

ಕಪಿಲಾ ಗೋ ಶಾಲೆ ಉಳಿವಿಗಾಗಿ ಬೇಡಿಕೆ- ನಳಿನ್‌ ಕುಮಾರ್‌ ವಿರುದ್ಧ ಹರಿಹಾಯ್ದ ಶ್ರೀರಿಷಿ ಕುಮಾರ ಸ್ವಾಮೀಜಿ!…

- Advertisement -
- Advertisement -

ಮಂಗಳೂರು:ಇಲ್ಲಿನ ಕೆಂಜಾರಿನ ಕಪಿಲಾ ಗೋ ಶಾಲೆಯ ಕಟ್ಟಡದ ಜಮೀನನ್ನು ಸರ್ಕಾರ ಕೋಸ್ಟ್‌ ಗಾರ್ಡ್‌ಗೆ ಮಂಜೂರು ಮಾಡಲು ವ್ಯವಸ್ಥೆ ಮಾಡುತ್ತಿದ್ದು ಈ ಹಿನ್ನೆಲೆ ಕಟ್ಟಡವನ್ನು ತೆರವುಗೊಳಿಸಲು ಒತ್ತಡ ಹೇರಲಾಗಿತ್ತು.ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಳಿಕಾ ಮಠದ ಶ್ರೀರಿಷಿ ಕುಮಾರ ಸ್ವಾಮೀಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“ಕಪಿಲಾ ಗೋ ಶಾಲೆ ಕಟ್ಟಡ ಕೆಡವಲು ಅಧಿಕಾರಿಗೆ ಕುಮ್ಮಕ್ಕು ನೀಡುತ್ತಿರುವುದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಂಬ ಅನುಮಾನ ನಮಗಿದೆ ಬಿಜೆಪಿ ಸರಕಾರ ಗೋರಕ್ಷಣೆಯನ್ನು ಮಾಡುವಲ್ಲಿ ನಿರತವಾಗಿಲ್ಲ, ಅದು ಗೋ ಹತ್ಯೆ ನಿಷೇಧ ಮಾಡುತ್ತಿದೆಯೋ ಗೋ ಶಾಲೆಯನ್ನು ನಿಷೇಧ ಮಾಡುತ್ತಿದೆಯೋ ಅನ್ನುವ ಅನುಮಾನ ನಮಗಿದೆ .

ನಾಶವಾಗುತ್ತಿರುವ ಗೋ ಸಂತತಿಯಾದ ಕಪಿಲಾ ಸಂತತಿಯ 95 ಗೋವುಗಳು ಕಪಿಲಾ ಗೋ ಶಾಲೆಯಲ್ಲಿವೆ. ಇದರ ರಕ್ಷಣೆ ಯಾರಿಗೂ ಬೇಕಿಲ್ಲ” ಎಂದು ದೂರಿದ ಅವರು ಕಪಿಲಾ ಗೋ ಶಾಲೆಯನ್ನು ಉಳಿಸಿಕೊಡುವಂತೆ ವಿನಂತಿಸಿದರು

- Advertisement -

Latest News

error: Content is protected !!