Sunday, June 7, 2026
Homeಕರಾವಳಿಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಪದವಿ ವಿದ್ಯಾರ್ಥಿನಿ ನಿಧನ

ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಪದವಿ ವಿದ್ಯಾರ್ಥಿನಿ ನಿಧನ

- Advertisement -
- Advertisement -

ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮಂಚಿ ಗ್ರಾಮದ ಭವ್ಯಾ(20) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಪುತ್ತೂರಿನ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು.

ಮೃತ ಭವ್ಯಾ ಕಳೆದ ಕೆಲವು ದಿನಗಳಿಂದ ತಲೆನೋವಿನಿಂದ ಬಳಲುತ್ತಿದ್ದು ಬಂಟ್ವಾಳ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ.

ಅಕ್ಟೋಬರ್ 23ರಂದು ಸಂಜೆ 7ರ ಸುಮಾರಿಗೆ ತಲೆನೋವು ಉಲ್ಬಣಿಸಿ ವಾಂತಿ ಮಾಡಿಕೊಂಡಿದ್ದು ಕೊನೆಗೆ ತಲೆನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲ್ಪಟ್ಟಿದೆ.

- Advertisement -

Latest News

error: Content is protected !!