Tuesday, May 14, 2024
Homeತಾಜಾ ಸುದ್ದಿಲೇಹ್, ಲಡಾಖ್ ಗಡಿ ಭಾಗಕ್ಕೆ ತೆರಳಿ ಆಯುಧ ಪರೀಕ್ಷಿಸಿ ಯೋಧರಿಗೆ ಧೈರ್ಯ ತುಂಬಿದ ರಕ್ಷಣಾ ಸಚಿವ...

ಲೇಹ್, ಲಡಾಖ್ ಗಡಿ ಭಾಗಕ್ಕೆ ತೆರಳಿ ಆಯುಧ ಪರೀಕ್ಷಿಸಿ ಯೋಧರಿಗೆ ಧೈರ್ಯ ತುಂಬಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

spot_img
- Advertisement -
- Advertisement -

ಲೇಹ್: ಚೀನಾ ಸಶಸ್ತ್ರ ಸೈನಿಕರ ಜೊತೆಗಿನ ಸಂಘರ್ಷದಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದ ಲೇಹ್ ಗಡಿ ಭಾಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು.

ಲೇಹ್, ಲಡಾಕ್ ಸೇರಿ ಜಮ್ಮು ಕಾಶ್ಮಿರ ಪ್ರದೇಶಗಳಿಗೆ ಎರಡು ದಿನಗಳ ಭೇಟಿಯನ್ನು ರಕ್ಷಣಾ ಸಚಿವರು ಇಂದಿನಿಂದ ಪ್ರಾರಂಭಿಸಿದರು. ಸಚಿವರ ಭೇಟಿ ಹಿನ್ನೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯ ಸಾಮಾಗ್ರಿಗಳ ಪರಿಶೀಲನೆ ನಡೆಯಿತು.

ಜುಲೈ 3 ರಂದು ಪ್ರಧಾನಿ ಲಡಾಖ್​ಗೆ ದಿಢೀರ್ ಭೇಟಿ ನೀಡಿ ಸೇನಾ ಪಡೆಗಳಿಗೆ ಧೈರ್ಯ ತುಂಬಿದ್ದರು. ಇದೀಗ ರಕ್ಷಣಾ ಸಚಿವರು ಲಡಾಖ್​ನ ಲೇಹ್​ಗೆ ಭೇಟಿ ನೀಡಿದ್ದು, ಇವರೊಂದಿಗೆ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಕೂಡ ಆಗಮಿಸಿದ್ದಾರೆ.

ಪೂರ್ವ ಲಡಾಖ್​​ನಲ್ಲಿ ಉಲ್ಬಣಿಸಿರುವ ಸಮಸ್ಯೆ ಮಧ್ಯೆ ಸವಿಸ್ತಾರವಾಗಿ ಅಲ್ಲಿನ ಭದ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ರಾಜನಾಥ್ ಸಿಂಗ್ ಸೇನಾಧಿಕಾರಿಗಳ ಜತೆ ಚರ್ಚೆ ನಡೆಸಿದರು.

- Advertisement -
spot_img

Latest News

error: Content is protected !!