Sunday, May 5, 2024
Homeತಾಜಾ ಸುದ್ದಿಶಂಕರ್ ನಾಗ್ ಬದುಕಿಲ್ಲ ಎಂದು ನಂಬೋಕೆ ಆಗಲ್ಲ: ಬಾಲಿವುಡ್ ನಟಿ

ಶಂಕರ್ ನಾಗ್ ಬದುಕಿಲ್ಲ ಎಂದು ನಂಬೋಕೆ ಆಗಲ್ಲ: ಬಾಲಿವುಡ್ ನಟಿ

spot_img
- Advertisement -
- Advertisement -

ಸ್ಯಾಂಡಲ್‍ವುಡ್ ಸಿನಿ ರಂಗಕ್ಕೆ ಅದೊಂದು ಕರಾಳ ದಿನ. 1990ರ ಸೆಪ್ಟೆಂಬರ್ 30 ಆಟೋ ರಾಜಾ ಶಂಕರ್ ನಾಗ್ ವಿಧಿವಶರಾದ ದಿನ. ಇದು ಸ್ಯಾಂಡಲ್‍ವುಡ್‍ಗೆ ಕರಾಳ ದಿನ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಕ್ಕೆ ಚಿತ್ರರಂಗದಲ್ಲಿ ಪರಿಣಾಮ ಬೀರಿದೆ. ಇದೀಗ ಶಂಕರ್ ನಾಗ್ ಅವರನ್ನು ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ ನೆನೆದಿದ್ದಾರೆ.

ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ದೀಪಿಕಾ ಚಿಕ್ಲಿಯಾ ಅವರು ಹೊಸ ಜೀವನ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. 1990ರಲ್ಲಿ ಈ ಚಿತ್ರ ತೆರೆಕಂಡಿತ್ತು. ಅದೇ ವರ್ಷ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. . 30 ವರ್ಷಗಳ ನಂತರ ಇದೀಗ  ಶಂಕರ್ ನಾಗ್ ಅವರ ಸಾವಿನ ಕುರಿತಂತೆ ದೀಪಿಕಾ ಚಿಕ್ಲಿಯಾ ಅವರು ಮಾತನಾಡಿದ್ದಾರೆ. 

 ಹೊಸ ಜೀವನ’ ಚಿತ್ರದ ‘ಲಾಲಿ ಲಾಲಿ ಲಾಲಿ ಜೋ… ನನ್ನ ಬಾಳಿನ ಬಂಗಾರ ಜೋ..’ ಹಾಡನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ದೀಪಿಕಾ, ‘ಈ ಹಾಡು ‘ಹೊಸ ಜೀವನ’ ಚಿತ್ರದ್ದು. ಈ ಸಿನಿಮಾದ ಲಾಸ್ಟ್ ಶೆಡ್ಯೂಲ್‌ ಮುಗಿಸಿದ ನಂತರ ನಟ ಶಂಕರ್ ನಾಗ್ ಅವರ ಕಾರು ಅಪಘಾತವಾಗಿ, ಅವರು ಮೃತರಾದರು. ಆ ಸುದ್ದಿ ಕೇಳಿ ನಾನು ಶಾಕ್‌ಗೆ ಒಳಗಾಗಿದ್ದೆ. ಅದರಿಂದ ಹೊರಬರಲು ತುಂಬ ಸಮಯ ಬೇಕಾಯ್ತು. ‘ಹೊಸ ಜೀವನ’ ನನ್ನ ಕರಿಯರ್‌ನ ದೊಡ್ಡ ಹಿಟ್ ಸಿನಿಮಾ. ಆದರೆ, ಶಂಕರ್ ನಾಗ್ ಇಲ್ಲದಿರುವ ನೋವು ಕಾಡುತ್ತದೆ’ ಎಂದಿದ್ದಾರೆ.

ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ 1983ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಅವರು ಜನಪ್ರಿಯರಾಗಿದ್ದು 1987-88ರ ಅವಧಿಯಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ಅವರು ಸೀತೆಯಾಗಿ ಅಭಿನಯಿಸಿದ್ದಾರೆ. ನಂತರ ಅವರಿಗೆ ಕನ್ನಡದಲ್ಲೂ ಅವಕಾಶ ಸಿಗಲು ಆರಂಭಿಸಿತು. ಮಂಡ್ಯದ ಗಂಡು ಅಂಬರೀಷ್ ಜೊತೆ ‘ಇಂದ್ರಜಿತ್’ ಸಿನಿಮಾದಲ್ಲಿ ನಟಿಸಿದ್ದರು.

ಆನಂತರ ಶಂಕರ್ ನಾಗ್ ಜೊತೆ ‘ಹೊಸ ಜೀವನ’ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರು. ಎಚ್.ಆರ್.ಭಾರ್ಗವ ಅವರ ನಿರ್ದೇಶನದಲ್ಲಿ ಶಂಕರ್ ನಾಗ್ ಮತ್ತು ದೀಪಿಕಾ ನಟಿಸಿದ್ದ ‘ಹೊಸ ಜೀವನ’ ಚಿತ್ರ ತಮಿಳಿನ ‘ಪಧಿಯಾ ಪಾಧೈ’ನ ರಿಮೇಕ್ ಆಗಿತ್ತು. ಅಲ್ಲದೆ ಹೊಸ ಜೀವನ ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ಸಂಯೋಜಿಸಿದ್ದರು. ಈ ಚಿತ್ರದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಈಗಲೂ ಸಹ ಎವರ್ ಗ್ರೀನ್ ಹಾಡುಗಳಾಗಿವೆ.

- Advertisement -
spot_img

Latest News

error: Content is protected !!