Saturday, May 25, 2024
Homeಕರಾವಳಿಉಡುಪಿಬ್ರಹ್ಮಾವರ: ಔಷಧಿಯೆಂದು ಇಲಿ ಪಾಷಾಣ ಕುಡಿದು ಮಹಿಳೆ ಸಾವು !

ಬ್ರಹ್ಮಾವರ: ಔಷಧಿಯೆಂದು ಇಲಿ ಪಾಷಾಣ ಕುಡಿದು ಮಹಿಳೆ ಸಾವು !

spot_img
- Advertisement -
- Advertisement -

ಬ್ರಹ್ಮಾವರ: ಬ್ರಹ್ಮಾವರದ ಪೆಜಮಂಗೂರುವಿನ ದೇವಕಿ ಎಂಬವರು ಔಷಧಿ ಎಂದು ಇಲಿ ಪಾಷಾಣವನ್ನು ಆಕಸ್ಮಿಕವಾಗಿ ಕುಡಿದು ಅಸ್ವಸ್ಥಗೊಂಡಿದ್ದರು. ಇದೀಗ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ .

ದೇವಕಿ ( 47 ) ಅವರು ತಮಗೆ ಕೆಮ್ಮು ಇದ್ದುದರಿಂದ ಸಿರಾಫ್ ಬಾಟಲಿಯಲ್ಲಿದ್ದ ಇಲಿ ಪಾಷಾಣವನ್ನು ಔಷಧಿಯೆಂದು ಕುಡಿದು ಅಸ್ವಸ್ಥಗೊಂಡಿದ್ದರು .

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವಕಿ ಇದೀಗ ಚಿಕಿತ್ಸೆ ಫಲಿಸಿದೆ ಮೃತಪಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!