Sunday, June 28, 2026
Homeಕರಾವಳಿಮಂಗಳೂರು: ಮುಸ್ಲಿಂ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ; 20ಕ್ಕೂ ಅಧಿಕ ಮಂದಿಯಿಂದ ಕೃತ್ಯ!

ಮಂಗಳೂರು: ಮುಸ್ಲಿಂ ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ; 20ಕ್ಕೂ ಅಧಿಕ ಮಂದಿಯಿಂದ ಕೃತ್ಯ!

- Advertisement -
- Advertisement -

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರ ಮೇಲೆ 20ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಅಝೀಮ್, ಆಶಿಕ್ ಹಲ್ಲೆಗೊಳಗಾದ ಯುವಕರಾಗಿದ್ದು,ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರವೊಂದಕ್ಕೆ ಸಂಬಂಧಪಟ್ಟಂತೆ ಅಝೀಮ್‌ಗೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಧೈರ್ಯವಿದ್ದರೆ ಗುಡ್ಡೆ ಮೈದಾನದ ಬಳಿ ಬರುವಂತೆ ಸವಾಲನ್ನೂ ಹಾಕಿದ್ದ ಎನ್ನಲಾಗಿದೆ.

ನಡೆದ ಸಂಗತಿಯನ್ನು ಅಝೀಮ್ ತನ್ನ ಸಹೋದರ ಆಶಿಕ್‌ಗೆ ತಿಳಿಸಿದ್ದಾನೆ. ಆಶಿಕ್ ಸಹೋದರನನ್ನು ಕರೆದುಕೊಂಡು ಗುಡ್ಡೆ ಮೈದಾನದ ಬಳಿ ತೆರಳಿದಾಗ 20ಕ್ಕೂ ಅಧಿಕ ಮಂದಿಯ ತಂಡ ದೊಣ್ಣೆ, ಕಲ್ಲು, ಹೆಲ್ಮೆಟ್‌ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಕೃತ್ಯದಲ್ಲಿ ಸುಭಾಷ್, ಪದ್ಮನಾಬ್, ಶಿವು, ಲೋಕೇಶ್ ಸೇರಿ 20ಕ್ಕೂ ಅಧಿಕ ಮಂದಿ ಇದ್ದರೆಂದು ಆರೋಪಿಸಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅವರಿಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಠಾಣೆಗೆ ಬಂದಿಲ್ಲ ಎಂದು ಕಾವೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!