Saturday, June 6, 2026
Homeಕರಾವಳಿಸುಳ್ಯದ ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿದ ಮಾರುತಿ 800 ಕಾರಿನಲ್ಲಿ ವ್ಯಕ್ತಿ ಮೃತದೇಹ ಪತ್ತೆ

ಸುಳ್ಯದ ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿದ ಮಾರುತಿ 800 ಕಾರಿನಲ್ಲಿ ವ್ಯಕ್ತಿ ಮೃತದೇಹ ಪತ್ತೆ

- Advertisement -
- Advertisement -

ಸುಳ್ಯ:  ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ.
ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ‌. ವೀರಯ್ಯ ಹಿರೇಮಠ್ ,ಸುಳ್ಯ ಪಿ.ಎಸ್.ಐ. ದಿಲೀಪ್ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.


ಗೌರೀಶ್ ಕಳೆದ ಎರಡು ತಿಂಗಳಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಗೌರೀಶ ಪತ್ನಿ ಕಳೆದ ಎರಡು ತಿಂಗಳಿಂದ ಮನೆ ಬಿಟ್ಟು ಹೆಣ್ಣು ಮಗುವಿನೊಂದಿಗೆ ತೆರಳಿದ್ದು ಗೌರೀಶ್ ಮದ್ಯ ವ್ಯಸನಿಯಾಗಿದ್ದರು  ಎನ್ನಲಾಗಿದೆಯ ಇದೀಗ ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದ್ದು ಹತ್ತಾರು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಹಾಗಾದ್ರೆ ಗೌರೀಶ್ ಅವರನ್ನು ಇಷ್ಟು ದಿನ ಮನೆ ಮಂದಿ ಹುಡುಕಲಿಲ್ವಾ? ಪಾರ್ಕಿಂಗ್ ಜಾಗದಲ್ಲಿ ಅಷ್ಟೊಂದು ಜನ ಓಡಾಡ್ತಾರೆ ಯಾರು ನೋಡಿಲ್ವಾ? ಹೀಗೆ ಹಲವು ಅನುಮಾನಗಳು ಮೂಡಿವೆ.

ಮೃತ ಗೌರೀಶ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!