Thursday, June 4, 2026
Homeಕರಾವಳಿಉಡುಪಿಉಡುಪಿಯ ಮನೆಯೊಂದರಲ್ಲಿ ವೃದ್ಧರೊಬ್ಬರ ಶವಪತ್ತೆ:  ಮೃತದೇಹದೊಂದಿಗೆ ಮೂರು ದಿನ ಕಳೆದ ವೃದ್ಧೆ, ಮಹಿಳೆ

ಉಡುಪಿಯ ಮನೆಯೊಂದರಲ್ಲಿ ವೃದ್ಧರೊಬ್ಬರ ಶವಪತ್ತೆ:  ಮೃತದೇಹದೊಂದಿಗೆ ಮೂರು ದಿನ ಕಳೆದ ವೃದ್ಧೆ, ಮಹಿಳೆ

- Advertisement -
- Advertisement -

ಉಡುಪಿ: ಇಲ್ಲಿನ ಕಾಡಬೆಟ್ಟು ಎಂಬಲ್ಲಿ ವೃದ್ಧರೊಬ್ಬರ ಶವ ಅವರ ಮನೆಯಲ್ಲೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಹರಿಶ್ಚಂದ್ರ ಪೂಜಾರಿ (70) ಎಂದು ಗುರುತಿಸಲಾಗಿದೆ. ಇವರು ಮೃತಪಟ್ಟು ಮೂರು ದಿನಗಳು ಕಳೆದಿರಬಹುದೆಂದು ಶಂಕಿಸಲಾಗಿದೆ.

ಇನ್ನು ಮನೆಯಲ್ಲಿದ್ದ ಅನಾರೋಗ್ಯಪೀಡಿತ ವೃದ್ಧೆ ಮತ್ತು ಮಹಿಳೆ ಕೊಳೆತ ಶವದೊಂದಿಗೆ ಮೂರು ದಿನಗಳನ್ನು ಕಳೆದಿದ್ದಾರೆ! ವಾಸನೆ ಹಬ್ಬಿದ್ದರಿಂದ ಸ್ಥಳೀಯರಿಗೆ ವಿಷಯ ಗೊತ್ತಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಉಡುಪಿ ಠಾಣೆ ನಿರೀಕ್ಷಕ ಪ್ರಮೋದ್ ಪಿ, ಠಾಣಾಧಿಕಾರಿ ಮಹೇಶ್, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!