Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲೊಂದು ವಿಚಿತ್ರ ಘಟನೆ, ಮೃತಪಟ್ಟವರು ಒಬ್ಬರು ಶವಸಂಸ್ಕಾರಕ್ಕೆ ತಂದ ಶವ ಇನ್ನೊಬ್ಬರದ್ದು

ಉಡುಪಿಯಲ್ಲೊಂದು ವಿಚಿತ್ರ ಘಟನೆ, ಮೃತಪಟ್ಟವರು ಒಬ್ಬರು ಶವಸಂಸ್ಕಾರಕ್ಕೆ ತಂದ ಶವ ಇನ್ನೊಬ್ಬರದ್ದು

- Advertisement -
- Advertisement -

ಉಡುಪಿ : ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬನನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೊರೊನಾ ಸೋಂಕಿತರಾಗಿದ್ದ ಕಾರಣ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಕಳುಹಿಸಲಾಗಿತ್ತು. ಇಂತಹ ಶವವನ್ನು ಆಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ಶವಸಂಸ್ಕಾರ ಮಾಡಲು ತರಲಾಗಿತ್ತು. ಶವವನ್ನು ಸ್ಮಾಶನದಲ್ಲಿ ತೆರೆದು ನೋಡಿದವರಿಗೆ ಅಲ್ಲಿ ಶಾಕ್ ಕಾದಿತ್ತು. ಅದೇ ಮೃತಪಟ್ಟ ವ್ಯಕ್ತಿಯೇ ಬೇರೆಯಾಗಿದ್ದರೇ, ತಂದಿದ್ದ ಶವವೇ ಬೇರೆಯವರದ್ದಾಗಿತ್ತು.

ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನೇರಂಬಳ್ಳಿ ಮೂಲದ 65 ವರ್ಷದ ವೃದ್ಧರೊಬ್ಬರು  ಕೊರೊನಾದಿಂದ ಸಾವನ್ನಪ್ಪಿದ್ದರು. ಇವರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿದ್ದರು. ಇವರ ಶವವನ್ನು ಆಂಬುಲೆನ್ಸ್ ಚಾಲಕ ಸ್ಮಶಾನಕ್ಕೆ ತಂದಿದ್ದರು.

ಆದರೆ, ಕುಂದಾಪುರದ ಹಳೇಕೋಟೆಯ ಸ್ಮಶಾನದಲ್ಲಿ ಪ್ಯಾಕ್ ಮಾಡಿದ ಶವವನ್ನು ಬಿಚ್ಚಿ ನೋಡಿದಾಗ ಬೇರೆಯವರದ್ದಾಗಿತ್ತು. ಹೀಗಾಗಿ ವೃದ್ಧರ ಸಂಬಂಧಿಕರು ಆಂಬುಲೆನ್ಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

- Advertisement -

Latest News

error: Content is protected !!