Thursday, June 4, 2026
Homeತಾಜಾ ಸುದ್ದಿತಮ್ಮ ನಿವಾಸದಲ್ಲಿ ನವಿಲುಗಳೊಂದಿಗಿರುವ ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

ತಮ್ಮ ನಿವಾಸದಲ್ಲಿ ನವಿಲುಗಳೊಂದಿಗಿರುವ ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ

- Advertisement -
- Advertisement -

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ನವಿಲುಗಳೊಂದಿಗಿರುವ ಸುಂದರ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.

1.47 ನಿಮಿಷಗಳ ವೀಡಿಯೊವನ್ನು ಟ್ವಿಟರ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ತಮ್ಮಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ನವಿಲುಗಳೊಂದಿಗೆ ಸಮಯ ಕಳೆಯುವ ಸುಂದರ ದೃಶ್ಯಗಳಿವೆ .ಸುಂದರವಾದ ಹಿಂದಿಯ ಕವಿತೆಯ ಜೊತೆಗೆ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಈ ವಿಡಿಯೋವನ್ನು ನೋಡುತ್ತಿದ್ರೆ ಪ್ರಧಾನಿ ಹಾಗೂ ನವಿಲುಗಳ ಬಾಂಧವ್ಯ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಈ ವಿಡಿಯೋದ ಕೆಲವು ದೃಶ್ಯಗಳಲ್ಲಿ ಪ್ರಧಾನಿ ನವಿಲುಗಳಿಗೆ ಆಹಾರ ತಿನ್ನಿಸುತ್ತಿರುವುದು, ಪ್ರಧಾನಿಯವರು ತಮ್ಮವಾಕಿಂಗ್ ಮಾಡೋ ವೇಳೆ ನವಿಲುಗಳು ನರ್ತಿಸುತ್ತಿರುವ ದೃಶ್ಯಗಳಿವೆ. ಇದನ್ನು ನೋಡುತ್ತಿದ್ರೆ ಪ್ರಧಾನಿ ಹಾಗೂ ನವಿಲುಗಳ ನಡುವಿನ ಬಾಂಧವ್ಯ ಹೇಗಿದೆ ಅನ್ನೋದು ಸ್ಪಷ್ಟವಾಗುತ್ತದೆ.

- Advertisement -

Latest News

error: Content is protected !!