Friday, June 5, 2026
Homeಕರಾವಳಿಮಂಗಳೂರು; ವಿಧಾನಸಭಾ ಚುನಾವಣಾ ಹಿನ್ನೆಲೆ ಠೇವಣಿ ಇರಿಸಿದ ಆಯುಧಗಳನ್ನು ವಾಪಾಸ್ ಪಡೆಯಲು ಡಿಸಿ ಸೂಚನೆ

ಮಂಗಳೂರು; ವಿಧಾನಸಭಾ ಚುನಾವಣಾ ಹಿನ್ನೆಲೆ ಠೇವಣಿ ಇರಿಸಿದ ಆಯುಧಗಳನ್ನು ವಾಪಾಸ್ ಪಡೆಯಲು ಡಿಸಿ ಸೂಚನೆ

- Advertisement -
- Advertisement -

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಠೇವಣಿ ಇರಿಸಲಾದ ಆಯುಧಗಳನ್ನು ವಾಪಸ್ ಪಡೆಯಲು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ ನೀಡಿದ್ದಾರೆ.

ಚುನಾವಣೆ ಹಿನ್ನೆಲೆ ಮೇ 15ರವರೆಗೆ ನೀತಿ ಸಂಹಿತೆ ಜಾರಿಯಲ್ಲಿತ್ತು.  ಹೀಗಾಗಿ ಮೇ 16ರಿಂದ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ, ಅಧಿಕೃತ ಕೋವಿ ಹಾಗು ಮದ್ದುಗುಂಡು ವ್ಯಾಪಾರಸ್ಥರಿಂದ ಠೇವಣಿ ಇರಿಸಿರುವುದರಿಂದ ಆಯುಧ ಪರವಾನಿಗೆದಾರರಿಗೆ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!