Thursday, June 4, 2026
Homeಕರಾವಳಿಮಂಗಳೂರು: ಅಸ್ವಸ್ಥಗೊಂಡ ದಿ.ಕದ್ರಿ ಗೋಪಾಲನಾಥ್ ಅವರ ಪತ್ನಿಗೆ ಚಿಕಿತ್ಸೆ ಮಾಡಿದ ಡಿ.ಸಿ !

ಮಂಗಳೂರು: ಅಸ್ವಸ್ಥಗೊಂಡ ದಿ.ಕದ್ರಿ ಗೋಪಾಲನಾಥ್ ಅವರ ಪತ್ನಿಗೆ ಚಿಕಿತ್ಸೆ ಮಾಡಿದ ಡಿ.ಸಿ !

- Advertisement -
- Advertisement -

ಮಂಗಳೂರು: ದಿಢೀರ್ ಅಸ್ವಸ್ಥರಾದ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ ಕದ್ರಿ ಗೋಪಾಲನಾಥ್ ಅವರ ಪತ್ನಿಯನ್ನು ಉಪ ಆಯುಕ್ತ (ಡಿಸಿ) ಡಾ ರಾಜೇಂದ್ರ ಕೆ ವಿ ಅವರು ಉಪಚರಿಸಿದ ವಿಡಿಯೋ ವೈರಲ್ ಆಗಿದೆ.

ದಿವಂಗತ ಡಾ.ಕದ್ರಿ ಗೋಪಾಲನಾಥ್ ಅವರ ಜನ್ಮದಿನದ ಅಂಗವಾಗಿ ಕದ್ರಿ ಸಂಗೀತ ಸೌರಭ ಕಾರ್ಯಕ್ರಮ ನಡೆಯುತ್ತಿದ್ದಾಗ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸರೋಜಿನಿ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು.

ಕೂಡಲೇ ಅಲ್ಲೇ ಇದ್ದ ಡಿಸಿ ಡಾ.ರಾಜೇಂದ್ರ ಕೆ.ವಿ ಆಕೆಯನ್ನು ಪರೀಕ್ಷಿಸಿ ಸಕ್ಕರೆ ನೀರಿನ ದ್ರಾವಣ ನೀಡಿ ಆರೈಕೆ ಮಾಡಿದರು. ಅವರ ಈ ಉತ್ತಮ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!