Thursday, June 4, 2026
Homeತಾಜಾ ಸುದ್ದಿಕೊಡಗಿನಲ್ಲಿ ರಣಕೇಕೆ ಹಾಕುತ್ತಿದೆ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ

ಕೊಡಗಿನಲ್ಲಿ ರಣಕೇಕೆ ಹಾಕುತ್ತಿದೆ ಕಿಲ್ಲರ್ ಕೊರೊನಾ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ

- Advertisement -
- Advertisement -

ಕೊಡಗು :  ಗ್ರೀನ್ ಝೋನ್ ನಲ್ಲಿದ್ದ ಕೊಡಗು ದಿನವಾಗಿ ಡೇಂಜರ್ ಝೋನ್ ನತ್ತ ಸಾಗುತ್ತಿರೋದು ಕೊಡಗಿನ ಜನತೆಯನ್ನು ಆತಂಕಕ್ಕೆ ದೂಡಿದೆ. ದಿನೇ ದಿನೇ ಕೊಡಗಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು ಇದೀಗ ಮಂಜಿನ ನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

 ಇಂದು ಕೊಡಗಿನಲ್ಲಿ ಮತ್ತೆ 4 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಿಂದ 33 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗೇ ಮೂರ್ನಾಡಿನ  ಸುಭಾಷ್ ನಗರದ 36 ವರ್ಷದ ವ್ಯಕ್ತಿಯಲ್ಲೂ ಕೊರೊನಾ ಸೋಂಕು ಇರೋದು ದೃಢಪಟ್ಟಿದೆ. ಮತ್ತೊಂದು ಕಡೆ ಶಿರಂಗಾಲ ಸೋಂಕಿತನ ಸಂಪರ್ಕದಿಂದ 14 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಹುಲುಸೆಯಲ್ಲಿ ಸೋಂಕಿತನ ಸಂಪರ್ಕದಿಂದ 8 ವರ್ಷದ ಪುಟ್ಟ ಬಾಲಕನಿಗೂ ಕೊರೊನಾ ಇರೋದು ದೃಢಪಟ್ಟಿದೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ 19 ಪ್ರದೇಶಗಳನ್ನು ನಿಯಂತ್ರಿತ ಪ್ರದೇಶಗಳಿಂದ ಗುರುತಿಸಲಾಗಿದೆ ಎಂದು ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ.

- Advertisement -

Latest News

error: Content is protected !!