ಮಂಗಳೂರ: ವೃದ್ಧ ಮಾವನಿಗೆ ಸೊಸೆ ವಾಕಿಂಗ್ ಸ್ಟಿಕ್ ನಲ್ಲಿ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.

ಪದ್ಮನಾಭ ಸುವರ್ಣ(87), ಸೊಸೆಯಿಂದ ಹಲ್ಲೆಗೊಳಗಾದ ಮಾವ. ಉಮಾಶಂಕರಿ ಮಾವನಿಗೆ ಥಳಿಸಿದ ರಾಕ್ಷಸಿ ಸೊಸೆ. ಉಮಾಶಂಕರಿ ಅತ್ತಾವರದಲ್ಲಿ ಕೆಇಬಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ.ಮಾರ್ಚ್ 9 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉಮಾಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿದ್ದಾರೆ. ಅವರು ಮನೆಯ ಸಿಸಿಟಿವಿಯನ್ನು ತನ್ನ ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡಿದ್ದರು. ನಿನ್ನೆ ಸಿಸಿಟಿವಿ ಪರಿಶೀಲಿಸಿದಾಗ ಪತ್ನಿಯ ರಾಕ್ಷಸಿ ಕೃತ್ಯ ಗೊತ್ತಾಗಿದೆ. ಕೂಡಲೇ ಸಹೋದರಿ ಮೂಡಬಿದರೆಯಲ್ಲಿರುವ ಪ್ರಿಯಾ ಸುವರ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಿಸಿ ಟಿವಿ ದೃಶ್ಯ ಆಧರಿಸಿ ದೂರು ನೀಡಲು ತಿಳಿಸಿದ್ದಾರೆ. ಅದರಂತೆ ಸಿಸಿಟಿವಿ ದೃಶ್ಯ ಆಧರಿಸಿ ಪ್ರಿಯಾ ಠಾಣೆಗೆ ದೂರು ನೀಡಿದ್ದಾರೆ. ಕಂಕನಾಡಿ ಪೊಲೀಸರು ಉಮಾಶಂಕರಿಯನ್ನು ಬಂಧಿಸಿದ್ದಾರೆ. ಅಲ್ಲದೇ ಹಲ್ಲೆಯಿಂದ ವೃದ್ಧ ಪದ್ಮನಾಭ ಸುವರ್ಣ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.