Friday, June 5, 2026
Homeತಾಜಾ ಸುದ್ದಿದರ್ಶನ್ ನಟನೆಯ ‘ಶಾಸ್ತ್ರಿ’ ರೀ ರಿಲೀಸ್

ದರ್ಶನ್ ನಟನೆಯ ‘ಶಾಸ್ತ್ರಿ’ ರೀ ರಿಲೀಸ್

- Advertisement -
- Advertisement -

ದರ್ಶನ್‌ ನಟನೆಯ “ಶಾಸ್ತ್ರಿ” ಚಿತ್ರವನ್ನು ರೀ ರಿಲೀಸ್‌ ಮಾಡಲು ತಯಾರಿ ನಡೆದಿದ್ದು, ಸಿನಿಮಾ ಜು.12ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. 

ವಿತರಕ ವಿ.ಎಂ.ಶಂಕರ್‌ ಎನ್ನುವವರು ಈ ಚಿತ್ರವನ್ನು ರೀ ರಿಲೀಸ್‌ ಮಾಡುತಿದ್ದಾರೆ.

ಈ ಸಿನಿಮಾವನ್ನು ದರ್ಶನ್‌ ಜೈಲಿಗೆ ಹೋಗುವ ಆರು ತಿಂಗಳ ಮುಂಚೆಯೇ ಮರುಬಿಡುಗಡೆ ಮಾಡಲು ಪ್ಲಾನ್‌ ನಡೆದಿತ್ತಂತೆ. ಅದರಂತೆ ಈಗ ರಿಲೀಸ್‌ ಮಾಡುತ್ತಿದ್ದಾರೆ.

ಸದ್ಯ ದರ್ಶನ್‌ ಜೈಲಿನಲ್ಲಿರುವುದರಿಂದ ಅಭಿಮಾನಿಗಳು ಈ ಸಿನಿಮಾಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು. ದರ್ಶನ್‌ ನಟನೆಯ ಈ ಚಿತ್ರ 2005ರಲ್ಲಿ ತೆರೆಕಂಡಿತ್ತು. ಅಣಜಿ ನಾಗರಾಜ್‌ ನಿರ್ಮಾಣದ ಈ ಚಿತ್ರವನ್ನು ಪಿ.ಎನ್‌.ಸತ್ಯ ನಿರ್ದೇಶನ ಮಾಡಿದ್ದು, ಮಾಸ್‌ ಅಭಿಮಾನಿಗಳನ್ನು ರಂಜಿಸುವಲ್ಲಿ ಈ ಚಿತ್ರ ಯಶಸ್ಸು ಕಂಡಿತ್ತು.

- Advertisement -

Latest News

error: Content is protected !!