- Advertisement -
- Advertisement -
ಬೆಂಗಳೂರು: ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಡಿ ಬಾಸ್ ದರ್ಶನ್ ಪೂರ್ಣ ಪ್ರಮಾಣದ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ರಿಲೀಸ್ ಆಗಿದ್ದಾರೆ. ಈ ಮೂಲಕ 6 ವಾರಗಳ ಡಿ ಬಾಸ್ ಬೆನ್ನುನೋವಿನ ನಾಟಕಕ್ಕೆ ತೆರೆ ಬಿದ್ದಿದೆ.
ತೀವ್ರವಾದ ಬೆನ್ನುನೋವಿನ ಕಾರಣ ನೀಡಿ ದರ್ಶನ್ 6 ವಾರಗಳ ಮಧ್ಯಂತರ ಜಾಮೀನು ಪಡೆದಿದ್ದರು. ಡಿಸೆಂಬರ್ 13 ರಂದು ಅವರಿಗೆ ಪೂರ್ಣ ಪ್ರಮಾಣದ ಬೇಲ್ ಮಂಜೂರಾಗಿತ್ತು. ಅದರ ಬೆನ್ನಲ್ಲೇ ಇಂದು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದರ್ಶನ್ ಪುತ್ರ ವಿನೀಶ್ ಅಪ್ಪನನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದಾರೆ.
- Advertisement -