Thursday, April 25, 2024
Homeಕರಾವಳಿದ.ಕ ಜಿಲ್ಲೆಯ 17 ಗ್ರಾ.ಪಂ.ಗಳಿಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಜಿಲ್ಲಾಧಿಕಾರಿ

ದ.ಕ ಜಿಲ್ಲೆಯ 17 ಗ್ರಾ.ಪಂ.ಗಳಿಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಜಿಲ್ಲಾಧಿಕಾರಿ

spot_img
- Advertisement -
- Advertisement -

ಮಂಗಳೂರು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಗಳನ್ನು ಜೂ. 14 ರಿಂದ 21 ರವರೆಗೆ ಲಾಕ್ ಡೌನ್ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ.

ಮಂಗಳೂರು ತಾಲೂಕಿನ ನೀರುಮಾರ್ಗ ಮತ್ತು ಕೊಣಾಜೆ ಗ್ರಾ.ಪಂ ಗಳು,
ಬೆಳ್ತಂಗಡಿ ತಾಲೂಕಿನ ಕೊಯ್ಯುರು, ನಾರಾವಿ, ಮಿತ್ತಬಾಗಿಲು, ಮಾಲಾಡಿ, ನೆರಿಯ,ಲಾಯಿಲ, ಉಜಿರೆ, ಚಾರ್ಮಾಡಿ.
ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡು,
ಕಡಬ ತಾಲೂಕಿನ ಸವಣೂರು ಮತ್ತು ಸುಬ್ರಹ್ಮಣ್ಯ ಕೂಡ ಲಾಕ್ ಆಗಲಿದೆ.

ಈ 17 ಗ್ರಾ.ಪಂ.ವ್ಯಾಪ್ತಿಯಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ, ಹಾಲಿನ ಬೂತ್, ಹಾಲು ಸೊಸೈಟಿಗಳಲ್ಲಿ ಹಾಲು ಖರೀದಿಗೆ, ಪೆಟ್ರೋಲ್ ಪಂಪ್, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅದೇಶದಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!