Friday, June 2, 2023
Homeಕರಾವಳಿಮೇವಿನ ಕೊರತೆ: ಕೊರೋನಾಗೆ ತತ್ತರಿಸಿದ ಕರಾವಳಿಯ ಹೈನುಗಾರಿಕೆ

ಮೇವಿನ ಕೊರತೆ: ಕೊರೋನಾಗೆ ತತ್ತರಿಸಿದ ಕರಾವಳಿಯ ಹೈನುಗಾರಿಕೆ

- Advertisement -
- Advertisement -

ಮಂಗಳೂರು: ಕರಾವಳಿ ಭಾಗದಲ್ಲಿ ಸಾವಿರಾರು ಕುಟುಂಬಗಳು ಹೈನುಗಾರಿಕೆಯ ಆದಾಯವನ್ನು ನಂಬಿ ಜೀವನ ನಡೆಸುತ್ತಿವೆ . ಪ್ರತೀ ದಿನ ಗ್ರಾಮೀಣ ಭಾಗದ ಹಾಲು ಉತ್ಪಾದಕ ಸಂಘದ ಮೂಲಕ ಲಕ್ಷಾಂತರ ಲೀಟರ್ ಹಾಲು ಪೂರೈಕೆಯಾಗುತ್ತಿದೆ.
ಆದರೆ ಕೊರೋನಾ ಹಾವಳಿ ಮತ್ತು ಬೇಸಿಗೆಯಿಂದಾಗಿ ಪಶುಗಳಿಗೆ ಸರಿಯಾದ ಮೇವು ನೀಡಲು ರೈತರಿಂದ ಆಗುತ್ತಿಲ್ಲ. ಪ್ರತೀ ವರ್ಷ ಸುಮಾರು 1500 ಮಿಕ್ಕಿ‌ ಲೊಡ್ ಒಣ ಹುಲ್ಲು ಗಳು, ಹಾಸನ , ಸಕಲೆಶಪುರ, ಮೂಡಿಗೆರೆ ಮೊದಲಾದ ಕಡೆಗಳಿಂದ‌ ಬರುತ್ತಿತ್ತು. ಅದನ್ನೆ ನಂಬಿ ಕೆಲವೊಂದು ವ್ಯಾಪಾರಿಗಳು ಜೀವನ ಮಾಡುತ್ತಿದ್ದರು.
ಇದೀಗ ಕೊರೊನಾ ಭಾದೆಯಿಂದ ಕಳೆದ 3 ತಿಂಗಳಿಂದ ಒಣ ಹುಲ್ಲು ಬರುತ್ತಿಲ್ಲ. ಮತ್ತು ನೀರಿನ ಸಮಸ್ಯೆಯಿಂದಾಗಿ ಹಸಿಹುಲ್ಲೂ ಸಿಗದೆ‌ ರೈತರು ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಹೈನುಗಾರಿಕೆ‌ ನಡೆಸುವುದೂ ತೀರಾ ತೊಂದರೆ ಆಗಿದೆ.

ಅಡಿಕೆ ಹಾಳೆಯ ಮೇವು

ರೈತರು ಮಲೆನಾಡು ಭಾಗದಲ್ಲಿ ಅಡಿಕೆ ಹಾಳೆಯನ್ನೆ ಕತ್ತರಿಸಿ ದನಗಳಿಗೆ ಮೇವು ಒದಗಿಸುವ ಪರಿಸ್ಥಿತಿ ಬಂದಿದೆ. ಆದುದರಿಂದ ಜಿಲ್ಲಾಡಳಿತ‌ ದ.ಕ ಮತ್ತು ಮಲೆನಾಡು ಭಾಗಕ್ಕೆ ಮುಖ್ಯವಾಗಿ ಶಿರಾಡಿ ಘಾಟಿ ಮತ್ತು ಚಾರ್ಮಾಡಿ ಘಾಟಿ ಮೂಲಕ ದನಗಳಿಗೆ ಒಣ ಹುಲ್ಲು ಮೇವು ಸಾಗಾಟಕ್ಕೆ‌ ಕೂಡಲೆ ಸ್ಪಂದಿಸುವಂತೆ ಹೈನುಗಾರಿಕೆ ನಡೆಸುತ್ತಿರುವ ಮತ್ತು ಧರ್ಮಸ್ಥಳ ಯೋಜನೆಯ ಹಿರಿಯ ನಿರ್ದೆಶಕರಾದ ಬಿ ಜಯರಾಮ ನೆಲ್ಲಿತ್ತಾಯ ಪ್ರಕಟಣೆಯಲ್ಲಿ ಮನವಿ ಮಾಡಿರುತ್ತಾರೆ.

- Advertisement -

Latest News

error: Content is protected !!