Friday, April 26, 2024
Homeಜ್ಯೋತಿಷ್ಯಸೋಮವಾರದ ರಾಶಿ ಭವಿಷ್ಯ;

ಸೋಮವಾರದ ರಾಶಿ ಭವಿಷ್ಯ;

spot_img
- Advertisement -
- Advertisement -

ಮೇಷ ರಾಶಿ:  ನಾನಾ ಕಡೆಯಿಂದ ಸುದ್ದಿ ಹರಿದು ಬರಲು ಶುರು ಆಗುತ್ತವೆ. ನಿಮ್ಮ ಪಾಲಿಗೆ ಯಾವುದು ಒಳ್ಳೆಯದು ಅಥವಾ ಯಾವುದು ಕೆಟ್ಟದ್ದು ಎಂದು ನಿರ್ಧರಿಸುವುದಕ್ಕೆ ಸಾಧ್ಯವಾಗದ್ದರ ಮಟ್ಟಿಗೆ ಸ್ಥಿತಿ ಇರುತ್ತದೆ.

ವೃಷಭ ರಾಶಿ:ವಿರೋಧಿಗಳು ನಿಮ್ಮ ದಾರಿಗೆ ಅಡ್ಡಿ ಬರಲಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಅಜೀರ್ಣದ ಸಮಸ್ಯೆ ಇರುವವರು ಕಡ್ಡಾಯವಾಗಿ ಆಹಾರ ಪಥ್ಯವನ್ನು ಪಾಲಿಸಿ.

ಮಿಥುನ ರಾಶಿ :ಇತರರ ಸಂಗತಿಗಳಲ್ಲಿ ತಲೆ ಹಾಕಲು ಹೋಗಬೇಡಿ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತೀರಿ. ಭವಿಷ್ಯದಲ್ಲಿ ನಡೆಯಬಹುದಾದ ಕೆಲವು ಘಟನೆಗಳ ಬಗ್ಗೆ ಸೂಚನೆ ದೊರೆಯಲಿದೆ.

ಕರ್ಕಾಟಕ ರಾಶಿ:ಈ ಹಿಂದಿನ ನಿಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ನೀಡಿದ ಮಾತಿಗೆ ಬದ್ಧರಾಗಿರಿ. ಹೆಚ್ಚಿನ ಲಾಭದ ಆಸೆಗೆ ಬಿದ್ದು, ಮನಸ್ಸು ಬದಲಾಯಿಸಿಕೊಂಡಲ್ಲಿ ಆ ನಂತರ ಪಶ್ಚಾತ್ತಾಪ ಪಡುವಂತಾಗುತ್ತದೆ. 

ಸಿಂಹ ರಾಶಿ:ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮನೆಯಲ್ಲಿ ಮದುವೆ ಮುಂತಾದ ಶುಭ ಕಾರ್ಯಗಳಿಗೆ ನೇತೃತ್ವ ವಹಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ. 

ಕನ್ಯಾ ರಾಶಿ:ಖರ್ಚು ಮಾಡುವಾಗ ನಿಗಾ ಇರಲಿ. ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಆಪ್ತರ ಬಗ್ಗೆ ಹಣಕಾಸು ವಿಚಾರಕ್ಕೆ ಅನುಮಾನ ಪಡಬೇಡಿ.

ತುಲಾ ರಾಶಿ: ವಾಹನ, ಗ್ಯಾಜೆಟ್ ಅಥವಾ ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿ ಮಾಡಲು ಸಂಗಾತಿ ಜತೆಗೆ ಚರ್ಚೆ ನಡೆಸಲಿದ್ದೀರಿ. ನಯವಾಗಿ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಲಿದ್ದೀರಿ.

ವೃಶ್ಚಿಕ: ಸ್ನೇಹಿತರು- ಸಂಬಂಧಿಕರ ಮೂಲಕ ಹಣ ಬರಬೇಕಿದ್ದಲ್ಲಿ ಅದು ಬರುವ ಸಾಧ್ಯತೆ ಇದೆ. ಆದರೆ ಇದಕ್ಕಾಗಿ ನೀವು ಪ್ರಯತ್ನ ಹಾಕಲೇಬೇಕು. ಲೇವಾದೇವಿ ವ್ಯವಹಾರ ನಡೆಸುವವರಿಗೆ ಹೊಸ ಅವಕಾಶಗಳು ಕಾಣಿಸುತ್ತವೆ.

ಧನಸ್ಸು ರಾಶಿ: ವಿದೇಶ ಪ್ರಯಾಣ ಮಾಡಬೇಕು ಎಂದಿದ್ದಲ್ಲಿ ನಾನಾ ರೀತಿಯ ಅಡೆತಡೆಗಳು ಎದುರಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಿ. ಡೇರಿ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಹಣ ಅಗತ್ಯ ಕಂಡುಬರುತ್ತದೆ.

ಮಕರ ರಾಶಿ: ವ್ಯಾಪಾರಿಗಳು, ಉದ್ಯಮಿಗಳು ಹೊಸದಾಗಿ ಏನನ್ನಾದರೂ ಖರೀದಿ ಮಾಡುತ್ತಿದ್ದಲ್ಲಿ ಒಂದಕ್ಕೆ ನಾಲ್ಕು ಕಡೆ ವಿಚಾರಣೆ ನಡೆಸಿ. ಯಾವುದೇ ವಿಚಾರಕ್ಕೆ ಭಾವನಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಡಿ. 

ಕುಂಭ ರಾಶಿ:ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ದೀರ್ಘ ಕಾಲದಿಂದ ಬಾಕಿ ಇದ್ದ ಒಪ್ಪಂದಗಳು ಅಂತಿಮವಾಗುವ ಸಾಧ್ಯತೆಗಳಿವೆ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದುಕೊಂಡಿರುವವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಮೀನ ರಾಶಿ: ಕೆಲವರು ನಿಮ್ಮನ್ನು ಸಿಟ್ಟಿಗೇಳುವಂತೆ ಮಾಡಲಿದ್ದಾರೆ. ಸಂಯಮದಿಂದ ಇರುವುದಕ್ಕೆ ಪ್ರಯತ್ನಿಸಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ನಡೆಯಬಹುದು, ಎಚ್ಚರಿಕೆಯಿಂದ ವರ್ತಿಸಿ.

- Advertisement -
spot_img

Latest News

error: Content is protected !!