ಮೇಷ ರಾಶಿ
ತುಂಬಾ ದಿನದಿಂದ ಕಾಡುವ ಸಮಸ್ಯೆ. ಇಂದು ಬಗೆಹರಿಯುವ ಸಾಧ್ಯತೆ ಇದೆ ಪ್ರಯತ್ನ ಮಾಡಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ಜಿಗುಪ್ಸೆ ಇಂದ ನರಳುವಿರಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗಲಿದೆ. ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವದು.
ಶುಭ ಸಂಖ್ಯೆ: 6
ವೃಷಭ ರಾಶಿ
ಮಕ್ಕಳ ಮದುವೆ ವಿನಾಕಾರಣ ಮುಂದಕ್ಕೆ ಹೋಗುವುದು. ವ್ಯಾಪಾರದ ಉದ್ದೇಶ ಹೊಂದಿರುವುದರಿಂದ ಕುಟುಂಬದಲ್ಲಿ ಮಾತಾಡಲು ಸಮಯ ಇಲ್ಲದಂತೆ ಮಾಡುತ್ತದೆ. ನಿಮ್ಮ ಕಷ್ಟಗಳನ್ನು ತೀರಿಸಲು ವಿವಾಹ ಒಂದು ಸಹಾಯವಾಗುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ: 9
ಮಿಥುನ ರಾಶಿ
ದಂಪತಿಗಳು ಈ ದಿನ ಒಳ್ಳೆಯ ಅದ್ಭುತವಾದ ಸಂಜೆಯನ್ನು ಕಳೆಯಬಹುದು. ದೀರ್ಘವಾಗಿ ಬಾಕಿ ಇದ್ದ ಹಣಕಾಸು ಲಭ್ಯವಾಗುತ್ತದೆ. ಕುಟುಂಬದವರಿಗೆ ಯಾವುದೇ ಕೆಲಸ ಮಾಡಲು ಈ ದಿನ ಆಸಕ್ತಿ ಕಡಿಮೆ ಇರುತ್ತದೆ. ಇದರಿಂದ ವೈಮನಸ್ಸು ಉಂಟಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು.
ಶುಭ ಸಂಖ್ಯೆ: 4
ಕರ್ಕಾಟಕ ರಾಶಿ
ಅನಾರೋಗ್ಯ ಇದ್ದು ಭಾರೀ ನಿರ್ಲಕ್ಷ್ಯ ಮಾಡಿದರೆ ದುಬಾರಿ ಖರ್ಚು ಒದಗಿ ಬರುವುದು. ಮನೆಯಲ್ಲಿ ವಿವಾಹ ಶುಭಕಾರ್ಯ ಮಾಡುವುದರಿಂದ ಎಲ್ಲರಲ್ಲೂ ಶಾಂತಿ ನೆಲೆಸುತ್ತದೆ. ಈ ದಿನ ವಿದ್ಯಾಭ್ಯಾಸದಿಂದ ಅರಿತುಕೊಳ್ಳಿ. ಹೊರಗಿನ ವಾತಾವರಣ ಮಿಶ್ರ ಫಲಿತಾಂಶ. ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ.ದೂರಪ್ರಯಾಣ ಯೋಗವಿದೆ.
ಶುಭ ಸಂಖ್ಯೆ: 1
ಸಿಂಹ ರಾಶಿ
ಉದ್ಯೋಗಸ್ಥರು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ಕೆಲಸದಲ್ಲಿ ಇರುವ ಭಯವನ್ನು ಸಾಧ್ಯವಾದಷ್ಟು ಬೇಗನೆ ತೊಡೆದುಹಾಕಬೇಕು. ಇಲ್ಲವಾದರೆ ಇದು ಕೂಡ ನಿಮ್ಮ ಆರೋಗ್ಯವನ್ನು ನಶಿಸಬಹುದು. ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ.ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ.
ಶುಭ ಸಂಖ್ಯೆ: 3
ಕನ್ಯಾ ರಾಶಿ
ಹೊಸ ಕೆಲಸ ಲಾಭದಾಯಕವಾಗಿ ಕಂಡರೂ ಬಯಸಿದ ಲಾಭವನ್ನು ಬೇಗನೆ ತರುವುದಿಲ್ಲ. ಮಡದಿಗೆ ಆದಷ್ಟು ಉಡುಗೊರೆಗಳನ್ನು ನೀಡಿದರೆ ಕುಟುಂಬದಲ್ಲಿ ಸಂತೋಷದಿಂದ ಇರಬಹುದು. ವಿವಾಹಕ್ಕೆ ನಿಮ್ಮ ನಿರ್ಧಾರ ಮೇಲ್ನೋಟಕ್ಕೆ ಒಳ್ಳೆಯದಾಗಿ ಕಂಡರುತೊಂದರೆಯಾಗಬಹುದು. ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ.
ಶುಭ ಸಂಖ್ಯೆ: 7
ತುಲಾ ರಾಶಿ
ಹಣಕಾಸಿನಲ್ಲಿ ಏರುಪೇರಾಗಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಅಭಿಪ್ರಾಯ ಇರಿಸಿಕೊಳ್ಳಲು ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಬೇಕು. ಈ ದಿನ ಹೊರಗಡೆ ಹೋಗಬೇಕಾದರೆ ಮನೆದೇವರನ್ನು ನೆನೆಸಿಕೊಂಡು ಪ್ರಯಾಣ ಮಾಡಿ. ತುಲಾ: ಕೈಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುವವು. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವದು. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವದು.
ಶುಭ ಸಂಖ್ಯೆ: 8
ವೃಶ್ಚಿಕ ರಾಶಿ
ಕುಟುಂಬದವರಿಗೆ ನಿಮ್ಮ ಬಗ್ಗೆ ಆಸಕ್ತಿ ಇಲ್ಲ ಎಂಬುದನ್ನು ಅವರ ನಡುವಳಿಕೆ ತೋರಿಸುತ್ತದೆ. ನಿಮ್ಮ ಆರೋಗ್ಯ ಕಾಪಾಡಲು ಹೆಚ್ಚು ಸಮಯ ನಿಮ್ಮ ಬಳಿ ಇರುತ್ತದೆ. ಮದುವೆ ಮಾಡುವಾಗ ಜಾತಕ ಫಲ ನೋಡಿ ಗಣಗಳನ್ನು ಕೂಡು ಬರುತ್ತದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವದು.
ಶುಭ ಸಂಖ್ಯೆ: 2
ಧನಸ್ಸು ರಾಶಿ
ಧನಲಾಭ ಇರುತ್ತದೆ. ಹಣಕಾಸಿನ ಕೆಲಸ ಇದ್ದರೆ ಪ್ರಯತ್ನಿಸಿ. ನೆರೆಹೊರೆಯವರು ಮತ್ತು ಸಂಬಂಧಿಗಳನ್ನು ಕಂಡರೆ ನಿಮಗೆ ಹೆಚ್ಚು ಮುಂಗೋಪ ಕಾಣಿಸಬಹುದು. ಅವಸರವೇ ಅಪಾಯ ಕಟ್ಟಿಟ್ಟ ಬುತ್ತಿ. ಶಾಂತವಾಗಿರಲು ಪ್ರಯತ್ನಿಸಿ. ಬರುವ ಕಷ್ಟಗಳನ್ನು ಎದುರಿಸಿ ಸಫಲತೆಯನ್ನು ಹೊಂದುವಿರಿ. ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ.
ಶುಭ ಸಂಖ್ಯೆ: 5
ಮಕರ ರಾಶಿ
ದಾಂಪತ್ಯದಲ್ಲಿ ಅನುಮಾನದಿಂದ ಈದಿನ ಬೇಸರ ತರುತ್ತದೆ. ಹಣಕಾಸಿನ ಸುಧಾರಣೆ ಕಾಣಬಹುದು. ಕುಟುಂಬದ ವಾತಾವರಣ ಉತ್ತಮ ಎನಿಸಿರುವ ಕಾರಣ ಗುರು-ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳು ನಿರ್ವಹಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವದು..
ಶುಭ ಸಂಖ್ಯೆ: 1
ಕುಂಭ ರಾಶಿ
ನಿಮ್ಮ ಜಾಗರೂಕತೆಯಿಂದ ಅಪಾಯದಿಂದ ಪಾರಾಗುವಿರಿ. ಸತಿ-ಪತಿ ಕಲಹದಿಂದ ಮನೆಯಲ್ಲಿ ಅಶಾಂತಿಯ ವಾತಾವರಣ. ಉದ್ಯೋಗ ಬದಲಾಗದ ಕಾರಣ ವೃತ್ತಿಜೀವನದಲ್ಲಿ ಬೆಳವಣಿಗೆ ಕಡಿಮೆ. ಆರೋಗ್ಯದ ದೃಷ್ಟಿಯಿಂದ ಶ್ರೀ ಗುರುರಾಘವೇಂದ್ರ ಸ್ವಾಮಿಗೆ ಪೂಜೆ ಸಲ್ಲಿಸಿ. ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವದು. ಅಡೆತಡೆಗಳ ನಿವಾರಣೆ ಯಾಗುವದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವದಿಲ್ಲ. ಹಿರಿಯರ ಸಲಹೆ ದೊರೆಯುವದು.
ಶುಭ ಸಂಖ್ಯೆ: 7
ಮೀನಾ ರಾಶಿ
ನಿಮ್ಮ ಜೀವನದ ಸಕಲ ಗೌರವ ಸೌಭಾಗ್ಯ ಸಿಗುವ ಅವಕಾಶ ಇರುತ್ತದೆ. ಆದರೆ ಒಬ್ಬ ವ್ಯಕ್ತಿಯಿಂದ ವಿಳಂಬವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸ್ನೇಹಿತರ ಮೂಲಕ ಹಣ ಕೈಸೇರುವಾಗ ಹುಷಾರಾಗಿರಿ. ಅಧಿಕವಾಗಿ ಬೇರೆಯವರ ಆಕರ್ಷಣೆಗೆ ಒಳಗಾಗುವುದು ಬೇಡ. ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ.
ಶುಭ ಸಂಖ್ಯೆ: 6