Sunday, June 7, 2026
Homeತಾಜಾ ಸುದ್ದಿಡ್ರಗ್ಸ್‌ ಪ್ರಕರಣಕ್ಕೆ ಮಹತ್ವದ ತಿರುವು- ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರನ ಬಂಧನ

ಡ್ರಗ್ಸ್‌ ಪ್ರಕರಣಕ್ಕೆ ಮಹತ್ವದ ತಿರುವು- ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರನ ಬಂಧನ

- Advertisement -
- Advertisement -

ಮುಂಬೈ: ಹಲವು ದಿನದಿಂದ ಡ್ರಗ್ಸ್‌ ಪ್ರಕರಣ ಸಡ್ಡು ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಪರ್ವೇಜ್‌ ಖಾನ್‌ ಅಲಿಯಾಸ್‌ ಚಿಂಕು ಪಠಾಣ್‌ ಎಂಬಾತನನ್ನು ನವಿ ಮುಂಬೈನಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ನವಿಮುಂಬೈನ ಪ್ರದೇಶವೊಂದರಲ್ಲಿ ಅವಿತಿದ್ದ ಪರ್ವೇಜ್‌ ಖಾನ್‌ಬಳಿ ಬಂಧನದ ವೇಳೆ ಕೆಲವು ಡ್ರಗ್ಸ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದು ಮಾದಕವಸ್ತುವಿನ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆಲವು ಪೆಡ್ಲರ್‌ಗಳೊಂದಿಗೆ ಸಹ ಪರ್ವೇಜ್‌ ಸಂಪರ್ಕ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!