Sunday, April 28, 2024
Homeಜ್ಯೋತಿಷ್ಯಇಂದಿನ ರಾಶಿಫಲ: ಈ ರಾಶಿಯವರ ಅರೋಗ್ಯದಲ್ಲಿ ಸುಧಾರಣೆ ಸಾಧ್ಯತೆ..

ಇಂದಿನ ರಾಶಿಫಲ: ಈ ರಾಶಿಯವರ ಅರೋಗ್ಯದಲ್ಲಿ ಸುಧಾರಣೆ ಸಾಧ್ಯತೆ..

spot_img
- Advertisement -
- Advertisement -

ಮೇಷ: ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವದು. ಉನ್ನತ ಶಿಕ್ಷಣದ ಕನಸು ಈಡೇರುವದು.
ಶುಭ ಸಂಖ್ಯೆ: 2

ವೃಷಭ: ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ.
ಶುಭ ಸಂಖ್ಯೆ: 9

ಮಿಥುನ: ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ.
ಶುಭ ಸಂಖ್ಯೆ: 4

ಕರ್ಕ: ಸ್ವಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ.
ಶುಭ ಸಂಖ್ಯೆ: 7

ಸಿಂಹ: ವಿನಾಕಾರಣ ನಿಂದೆಯ ಸಂಭವವಿದೆ. ಖರ್ಚುಹೆಚ್ಚಾಗುವದು ಯೋಗ ಇರುವದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವದು.
ಶುಭ ಸಂಖ್ಯೆ: 3

ಕನ್ಯಾ: ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.
ಶುಭ ಸಂಖ್ಯೆ: 6

ತುಲಾ: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವದು. ತರಕಾರಿ ದಾನ ಮಾಡಿರಿ.
ಶುಭ ಸಂಖ್ಯೆ: 8

ವೃಶ್ಚಿಕ: ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವದು. ಆರ್ಥಿಕ ಅಭಿವೃದ್ಧಿ ಕಂಡುಬರುವದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವದು. ಶತೃಗಳೂ ಸೌಮ್ಯರಾಗುವ ಕಾಲ ಇರುವದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ.
ಶುಭ ಸಂಖ್ಯೆ: 5

ಧನು: ನಿಶ್ಚಿತ ಕೆಲಸಕ್ಕೆ ಬೆಂಬಲ ಸಿಗುವದರಿಂದ ಉತ್ತಮ ಫಲ ದೊರೆಯುವದು. ಸುಮ್ಮನೇ ಕೂಡದ ಜಾಯಮಾನ ಇರುವದರಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ಹಿಂದಿನ ಬಾಕಿ ವಸೂಲಾತಿಗೆ ಶ್ರಮಿಸಬೇಕಾಗುವದು.
ಶುಭ ಸಂಖ್ಯೆ: 1

ಮಕರ: ಹಳೆಯ ಸಾಲ ಮರುಪಾವತಿಯಾಗುವದು. ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವವಿದೆ. ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಎದುರಾಡುವ ಸಂಭವವಿದೆ.
ಶುಭ ಸಂಖ್ಯೆ: 4

ಕುಂಭ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ,ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು.ಸಭಾಸಮಾಜ ಕೀರ್ತಿ ಲಭಿಸುವುದು.
ಶುಭ ಸಂಖ್ಯೆ: 9

ಮೀನ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ.
ಶುಭ ಸಂಖ್ಯೆ: 3

- Advertisement -
spot_img

Latest News

error: Content is protected !!