Monday, April 29, 2024
Homeಕರಾವಳಿದೇಶದ 15 ನೇ ರಾಷ್ಟ್ರಪತಿಯಾಗಿ  ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು:  ಸುದ್ದಿಗೋಷ್ಠಿ ಮೂಲಕ ಅಭಿನಂದನೆ ಸಲ್ಲಿಸಿದ...

ದೇಶದ 15 ನೇ ರಾಷ್ಟ್ರಪತಿಯಾಗಿ  ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು:  ಸುದ್ದಿಗೋಷ್ಠಿ ಮೂಲಕ ಅಭಿನಂದನೆ ಸಲ್ಲಿಸಿದ ದ.ಕ. ಬಿಜೆಪಿ ಎಸ್ ಟಿ ಮೋರ್ಚಾ

spot_img
- Advertisement -
- Advertisement -

ಬೆಳ್ತಂಗಡಿ : ದೇಶದ 15 ನೇ ರಾಷ್ಟ್ರಪತಿಯಾಗಿ ಆದಿವಾಸಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರು‌ಪ್ರಮಾಣವಚನ ಸ್ವೀಕರಿಸಿದ್ದಾರೆ.‌ ಈ ಹಿನ್ನೆಲೆ‌ ಕೇಂದ್ರದ ಎನ್ ಡಿ ಎ ಸರಕಾರಕ್ಕೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಿಜೆಪಿ ದ.ಕ. ಜಿಲ್ಲಾ ಎಸ್.ಟಿ. ಮೋರ್ಚಾ  ಕೃತಜ್ಞತೆ ಸಲ್ಲಿಸಿದೆ‌‌. ಅಲ್ಲದೇ  ನೂತನ ರಾಷ್ಟ್ರಪತಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.

  ಗುರುವಾಯನಕೆರೆ ನವಶಕ್ತಿ ರೆಶಿಡೆನ್ಸಿಯಲ್ ಹಾಲ್ ನಲ್ಲಿ  ನಡೆದ  ಸುದ್ದಿಗೋಷ್ಠಿ  ಉದ್ದೇಶಿಸಿ ಮಾತನಾಡಿದ ಬಿಜೆಪಿ ಎಸ್. ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಚೆನ್ನಕೇಶವ ಅರಸಮಜಲು, ಕೇಂದ್ರ ಸರಕಾರದಲ್ಲಿ ಎನ್ ಡಿ ಎ ಅಧಿಕಾರಕ್ಕೆ ಬಂದ ಮೋದಿ ಯವರ ನೇತೃತ್ವದಲ್ಲಿ ಪರಿಶಿಷ್ಟ ಜನಾಂಗ, ಬುಡಕಟ್ಟು ಸಮಾಜದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ಉತ್ತಮ ಆಡಳಿತ ನೀಡಿದೆ. ರಾಷ್ಟ್ರಪತಿ ಆಯ್ಕೆಗೆ  ಮೂರು ಬಾರಿ ಅವಕಾಶ ಸಿಕ್ಕಿದಾಗ ಮುಸ್ಲಿಂ ಸಮುದಾಯದ ಡಾ. ಅಬ್ದುಲ್ ಕಲಾಂ, ಎಸ್ ಸಿ ಸಮುದಾಯದ ರಮಾನಾಥ್ ಕೊವಿಂದ್, ಹಾಗು ಈ ಬಾರಿ ಎಸ್ ಟಿ. ಮೋರ್ಚಾದ ದ್ರೌಪದಿ ಮುರ್ಮು ಇವರನ್ನು ಆಯ್ಕೆ ಮಾಡಿದ್ದಾರೆ .ಈ ಆಯ್ಕೆಯಿಂದ ಅದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ನೇಮಿಸಿ ವಿಶ್ವವೇ ಭಾರತ ವನ್ನು ಮೆಚ್ಚುವಂತೆ ಮಾಡಿದೆ . ಇದರಿಂದ ಬುಡಕಟ್ಟು ಜನಾಂಗದವರು ಅತ್ಯುತ್ತಮ ಸ್ಥಾನವನ್ನು ಅಲಂಕರಿಸ ಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ಎಂದರು.

ದ್ರೌಪದಿಯವರು ರಾಜಕೀಯವಾಗಿ ಹಲವು ಹುದ್ದೆಗಳ ಮೂಲಕ ಸೇವೆ ಸಲ್ಲಿಸಿ, ಜಾರ್ಕಂಡ್ ರಾಜ್ಯದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಬಿ ಜೆ ಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರ್,ಎಸ್ ಟಿ ಮೋರ್ಚಾ ತಾಲೂಕು ಅಧ್ಯಕ್ಷ ಹರೀಶ್ ಎಳನೀರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ , ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರ್ಯದರ್ಶಿ ಅಶೋಕ ನಾಯ್ಕ, ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!