Friday, May 17, 2024
Homeಕರಾವಳಿಮಂಗಳೂರು: ವಾಹನಗಳಲ್ಲಿ ಪ್ಲ್ಯಾಸ್ಟಿಕ್ ಧ್ವಜ ಹಾರಾಡಿಸಿದ್ರೆ ಕ್ರಿಮಿನಲ್ ಕೇಸ್: ದಕ್ಷಿಣಕನ್ನಡ ಸಿ.ಇ.ಓ ಕುಮಾರ್ ಎಚ್ಚರಿಕೆ

ಮಂಗಳೂರು: ವಾಹನಗಳಲ್ಲಿ ಪ್ಲ್ಯಾಸ್ಟಿಕ್ ಧ್ವಜ ಹಾರಾಡಿಸಿದ್ರೆ ಕ್ರಿಮಿನಲ್ ಕೇಸ್: ದಕ್ಷಿಣಕನ್ನಡ ಸಿ.ಇ.ಓ ಕುಮಾರ್ ಎಚ್ಚರಿಕೆ

spot_img
- Advertisement -
- Advertisement -

ಮಂಗಳೂರು: ಸ್ವಾತಂತ್ರ್ಯೋತ್ಸವದ ವೇಳೆ ವಾಹನಗಳಲ್ಲಿ ಪ್ಲ್ಯಾಸ್ಟಿಕ್ ಧ್ವಜ ಹಾರಾಟಕ್ಕೆ ಅವಕಾಶವಿಲ್ಲ. ಅದೇ ರೀತಿ ಎಲ್ಲಿಯೂ ಕೂಡಾ ಪ್ಲಾಸ್ಟಿಕ್ ಧ್ವಜ ಹಾರಾಟಕ್ಕೂ ಅಸ್ಪದವಿಲ್ಲ. ಈ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಈ ಬಗ್ಗೆ ಮಾತನಾಡಿರುವ ಅವರು ‘ಎಲ್ಲರೂ ಮನೆಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಧ್ವಜ ಹಾರಿಸುವುದಕ್ಕೆ ತೊಂದರೆ ಇಲ್ಲ. ಆದರೆ ನಿಯಮವನ್ನು ಮೀರಿದರೆ ಮಾತ್ರ ಜೈಲುಶಿಕ್ಷೆ ಅಷ್ಟೇ ಅಲ್ಲದೆ ರಾಷ್ಟ್ರಧ್ವಜಕ್ಕೆ ಅಗೌರವ, ನಾಶ, ಅಪಕೀರ್ತಿ, ಹರಿದು ಹಾಕಿದರೆ ಕ್ರಿಮಿನಲ್ ಕೇಸು ದಾಖಲಿಸಲು ಅವಕಾಶವಿದೆ.ಇದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಯಾರೇ ನಾಗರಿಕ ದೂರು ನೀಡಿದರೂ ಸಾಕಾಗುತ್ತದೆ. ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಅಟ್ಟಲು ಅವಕಾಶವಿದೆ. ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ.13ರಿಂದ 15ರವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು’ ಎಂದು ಹೇಳಿದರು.

ಸರ್ಕಾರದ ನಿಯಮದಂತೆ ಅತಿ ಗಣ್ಯರ ವಾಹನಗಳಲ್ಲಿ ಮಾತ್ರ ಎದುರು ಭಾಗದಲ್ಲಿ ಧ್ವಜ ಹಾಕಬಹುದು. ಆದರೆ ವಾಹನದ ಒಳಭಾಗದಲ್ಲಿ ಸ್ಟೇರಿಂಗ್ ಎದುರು ಮಾತ್ರ ಪುಟ್ಟ ಧ್ವಜ ಹಾಕಲು ಅಡ್ಡಿ ಇಲ್ಲ. ಕೈಮಗ್ಗ, ಖಾದಿ, ಉಣ್ಣೆ, ಪಾಲಿಸ್ಟರ್ ಧ್ವಜ ಹಾಕಲು ಅವಕಾಶ ಇದೆ. ಇಲ್ಲಿ ಪಾಲಿಸ್ಟರ್ , ಖಾದಿ, ಕಾಟನ್ ಧ್ವಜ ನೀಡಲಾಗುತ್ತಿದೆ. ರಾಷ್ಟ್ರಧ್ವಜ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ಸಂದರ್ಭ ರಾತ್ರಿಯೂ ಇಳಿಸದೆ ಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

- Advertisement -
spot_img

Latest News

error: Content is protected !!