Thursday, June 4, 2026
Homeತಾಜಾ ಸುದ್ದಿನಾಳೆ ಮೇಘನಾ ರಾಜ್ ಗೆ ವಿಶೇಷ ದಿನ: ಸುಂದರ್‌ ರಾಜ್‌ ಮನೆಯಲ್ಲಿ ಶುಭಕಾರ್ಯಕ್ಕೆ ಸಿದ್ಧತೆ!

ನಾಳೆ ಮೇಘನಾ ರಾಜ್ ಗೆ ವಿಶೇಷ ದಿನ: ಸುಂದರ್‌ ರಾಜ್‌ ಮನೆಯಲ್ಲಿ ಶುಭಕಾರ್ಯಕ್ಕೆ ಸಿದ್ಧತೆ!

- Advertisement -
- Advertisement -

ಬೆಂಗಳೂರು: ನಟಿ ಮೇಘನಾ ರಾಜ್‌ ಸರ್ಜಾ ತಾಯಿಯಾದ ಬಳಿಕ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮೊಮ್ಮಗನ ಆಗಮನದಿಂದ ಸುಂದರ್‌ ರಾಜ್‌ ಸಂಭ್ರಮಿಸಿದ್ದಾರೆ. ಸದ್ಯ ತವರು ಮನೆಯಲ್ಲಿ ಮೇಘನಾ ಇದ್ದಾರೆ. ಈ ನಡುವೆ ಒಂದು ಶುಭ ಕಾರ್ಯಕ್ಕೆ ಸುಂದರ್‌ ರಾಜ್‌ ಮತ್ತು ಸರ್ಜಾ ಕುಟುಂಬ ಸಿದ್ಧತೆ ಮಾಡಿಕೊಂಡಿದೆ. ನಾಳೆ (ನ.12) ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ಜರುಗಲಿದೆ.

ಜೆ.ಪಿ. ನಗರದಲ್ಲಿರುವ ಸುಂದರ್‌ ರಾಜ್‌-ಪ್ರಮೀಳಾ ಜೋಷಾಯ್‌ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಗು ಹುಟ್ಟಿ ಸರಿಯಾಗಿ 20 ದಿನಗಳಿಗೆ ಮೇಘನಾ ರಾಜ್ ಅವರ ಮುದ್ದು ಕಂದಮ್ಮನ ತೊಟ್ಟಿಲ ಶಾಸ್ತ್ರ ಮಾಡಲು ಎರಡೂ ಕುಟುಂಬದವರು ನಿರ್ಧರಿಸಿದ್ದಾರೆ.

ತೀರ ಖಾಸಗಿಯಾಗಿ ನಡೆಯುವ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಅಣ್ಣನ ಮಗುವಿಗಾಗಿ ಧ್ರುವ 10 ಲಕ್ಷದ ವೆಚ್ಚದಲ್ಲಿ ಮಗು ಹುಟ್ಟುವ ಮೊದಲೇ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ.

ಧ್ರುವ ಸರ್ಜಾ ಸೇರಿದಂತೆ, ಸರ್ಜಾ ಕುಟುಂಬದ ಹಲವರು ಇದರಲ್ಲಿ ಭಾಗವಹಿಸಲಿದ್ದಾರೆ. ಮಾಧ್ಯಮಗಳ ಜೊತೆಗೂ ಮೇಘನಾ ಮಾತನಾಡಲಿದ್ದಾರೆ. ವಿಶೇಷ ಎಂದರೆ ಮೇಘನಾ ಮಗನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ಕುತೂಹಲ ಆಭಿಮಾನಿಗಳಲ್ಲಿ ಮೂಡಿಸಿದೆ. ಈಗಾಗಲೇ ಅನೇಕರು ಹಲವು ಹೆಸರುಗಳಿಂದ ಪ್ರೀತಿಯಿಂದ ಕರೆಯುತ್ತಿದ್ದಾರೆ.

ಗಜಕೇಸರಿ ಯೋಗದಲ್ಲಿ ಜನಿಸಿದ ಮಗುವಿಗೆ ದೇವರ ಹೆಸರನ್ನಿಡುತ್ತಾರಾ? ಚಿರಂಜೀವಿ ನೆನಪು ಸೂಚಿಸೋ ನಾಮಧೇಯ ಇಡಲಾಗುತ್ತದೆಯೇ? ಇಲ್ಲವೇ ಚಿರು ಮೇಘನಾ ಇಬ್ಬರ ಪ್ರೀತಿಯ ಕುಡಿಯಾಗಿರೋದ್ರಿಂದ ಇಬ್ಬರ ಹೆಸರಿನ ಅಕ್ಷರವನ್ನೂ ಸೇರಿಸಿ ಸುಂದರ ಹೆಸರು ಕೂಡಿ ಬರುತ್ತದೆಯೇ? ಎಂಬ ಕುತೂಹಲ ಎಲ್ಲರಿಗೂ ಇದೆ.

- Advertisement -

Latest News

error: Content is protected !!