Tuesday, July 14, 2026
Homeಕರಾವಳಿಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಮೂಡಿದ ಬಿರುಕು; ವಾಹನ ಸವಾರರು ಎಚ್ಚರಿಕೆಯಿಂದ  ಸಂಚರಿಸುವಂತೆ ಮನವಿ

ಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಮೂಡಿದ ಬಿರುಕು; ವಾಹನ ಸವಾರರು ಎಚ್ಚರಿಕೆಯಿಂದ  ಸಂಚರಿಸುವಂತೆ ಮನವಿ

- Advertisement -
- Advertisement -

ಬಂಟ್ವಾಳ: ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಸೇತುವೆಯ ಮೇಲಿನ ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಇದು ಸೇತುವೆಯ ಬಿರುಕೇ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತಜ್ಞರು ಪರಿಶೀಲನೆ ನಡೆಸಬೇಕಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಈ ಸೇತುವೆಯಲ್ಲಿ ಈ ಹಿಂದೆಯೇ ಬಿರುಕು ಕಾಣಿಸಿಕೊಂಡು ಬಳಿಕ ಘನ ವಾಹನಗಳ ಸಂಚಾರ ಅಪಾಯಕಾರಿ ಎಂಬ ವರದಿ ನೀಡಲಾಗಿತ್ತು. ಆದರೆ ಕಾಲಕ್ರಮೇಣ ಘನ ವಾಹನಗಳು ಕೂಡ ಸಂಚಾರ ನಡೆಸುತ್ತಿದ್ದವು.ಇದೀಗ ಬಿರುಕು ಕಾಣಿಸಿಕೊಂಡಿದ್ದು ತಜ್ಞರು ಗೊಂದಲ ನಿವಾರಿಸಬೇಕಿದೆ

- Advertisement -

Latest News

error: Content is protected !!