- Advertisement -
- Advertisement -
ಚಿಕ್ಕಮಗಳೂರು: ಕುರಿ ಮಾಂಸಕ್ಕೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಚಿಕ್ಕಮಗಳೂರಿನ ಜಯಪುರದಲ್ಲಿ ಬಂಧಿಸಲಾಗಿದೆ.
ಸಿರಾಜ್, ಅನಿಲ್, ಡೆನಿಸ್ ಡಿಸೋಜ, ಡೆಂಜಿಲ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಇವರು ಕುರಿ ಮಾಂಸದೊಂದಿಗೆ ದನದ ಮಾಂಸ ಸೇರಿಸಿ ಮಾರಾಟ ಮಾಡುತ್ತಿದ್ದರು.
ಲಾಕ್ಡೌನ್ ಜಾರಿಯಾಗಿದ್ದರಿಂದ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು ಜಯಪುರ ಬಸ್ ನಿಲ್ದಾಣ ಸಮೀಪದ ಕೋಳಿ ಅಂಗಡಿಯಲ್ಲಿ ಗೋವು ಹತ್ಯೆ ಮಾಡಿ ಅವುಗಳ ಮಾಂಸವನ್ನು ಕುರಿ ಮಾಂಸದೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 40 ಕೆಜಿ ದನದ ಮಾಂಸ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
- Advertisement -