Thursday, May 16, 2024
Homeತಾಜಾ ಸುದ್ದಿವ್ಯಾಲೆಂಟೈನ್ ಡೇ ದಿನವನ್ನು ಅಪ್ಪಿಕೋ ದನ ದಿನವನ್ನಾಗಿ ಆಚರಿಸಿ; ಕೇಂದ್ರ ಸರ್ಕಾರಕ್ಕೆ ಹೀಗೊಂದು ಮನವಿ

ವ್ಯಾಲೆಂಟೈನ್ ಡೇ ದಿನವನ್ನು ಅಪ್ಪಿಕೋ ದನ ದಿನವನ್ನಾಗಿ ಆಚರಿಸಿ; ಕೇಂದ್ರ ಸರ್ಕಾರಕ್ಕೆ ಹೀಗೊಂದು ಮನವಿ

spot_img
- Advertisement -
- Advertisement -


ಬೆಂಗಳೂರು; ಫೆಬ್ರವರಿ 14 ವ್ಯಾಲೆಂಟೈನ್ ಡೇ ದಿನವನ್ನು ಪ್ರೇಮದ ಹೆಸರಲ್ಲಿ ಆಚರಿಸುವ ಬದಲು ಅದೇ ದಿನವನ್ನು ಅಪ್ಪಿಕೋ ದನ ದಿನವನ್ನಾಗಿ ಆಚರಿಸಿ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಗೋವು ಭಾರತೀಯ ಸಂಸ್ಕೃತಿ ಪ್ರತಿಬಂಬ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಇದು ಸಂಪತ್ತು ಹಾಗೂ ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಹಸುವಿನ ಅಪಾರ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು, ಗೋವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಗೋವು ಪ್ರಿಯರು ಗೋಮಾತೆಯ ಮಹತ್ವ ಗಮನದಲ್ಲಿಟ್ಟುಕೊಂಡು ಫೆ. 14 ಹಸು ಅಪ್ಪುಗೆ ದಿನವಾಗಿ ಆಚರಿಸಬಹುದು ಮತ್ತು ಜೀವನವನ್ನು ಸಂತೋಷ ಮತ್ತು ಸಕಾರಾತ್ಮಕ ಆಗಿಸಿಕೊಳ್ಳಬಹುದು ಎಂದು ಮಂಡಳಿ ಮನವಿ ಮಾಡಿಕೊಂಡಿದೆ.

- Advertisement -
spot_img

Latest News

error: Content is protected !!