Saturday, May 4, 2024
Homeಕರಾವಳಿಬೆಳ್ತಂಗಡಿ: ಮದುವೆ ಹಾಲ್ ಮಾಲೀಕರಿಗೆ ಮತ್ತು ಮದುವೆ ಮನೆಯವರಿಗೆ ತಹಶೀಲ್ದಾರ್ ರಿಂದ ದಂಡ

ಬೆಳ್ತಂಗಡಿ: ಮದುವೆ ಹಾಲ್ ಮಾಲೀಕರಿಗೆ ಮತ್ತು ಮದುವೆ ಮನೆಯವರಿಗೆ ತಹಶೀಲ್ದಾರ್ ರಿಂದ ದಂಡ

spot_img
- Advertisement -
- Advertisement -

ಬೆಳ್ತಂಗಡಿ: ತಹಶೀಲ್ದಾರ್ ತಂಡ ಇಂದು ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಶ್ರೀ ದೀಪಾ ಸಭಾಭವನದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಅನುಮತಿ ಪಡೆದುಕೊಂಡಿರುವುದಕ್ಕಿಂದ ಹೆಚ್ಚಿನ ಜನರು ಇರುವುದನ್ನು ತಿಳಿದ ತಾಲೂಕು ತಹಶೀಲ್ದಾರ್ ತಂಡದವರು ಸ್ಥಳಕ್ಕೆ ದಾಳಿ ನಡೆಸಿ ದಂಡ ವಿಧಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸದ್ರಿ ಮದುವೆಗೆ ಅಳದಂಗಡಿ ಗ್ರಾಮ ಪಂಚಾಯತ್ ನಿಂದ 50 ಜನರಿಗೆ ಅನುಮತಿ ಪಡೆದಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮೀರಿ 50 ಕ್ಕಿಂತಲೂ ಅಧಿಕ ಜನರು ನೆರೆದಿರುವುದನ್ನು ಗಮನಿಸಿದ ತಹಶೀಲ್ದಾರರ ತಂಡ ಶ್ರೀ ದೀಪಾ ಸಬಾಭವನದ ಮಾಲಕರಿಗೆ ರೂ 7500 ಹಾಗೂ ಮದುವೆ ಮನೆಯವರಿಗೆ ರೂ5000 ಸೇರಿದಂತೆ ಒಟ್ಟು 12500/- ದಂಡ ವಿಧಿಸಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪ್ರೊಬೆಷನರಿ ತಹಶೀಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಕರಣಿಕ ವಿಜೇತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!