Friday, May 3, 2024
Homeಇತರಸಿಎಫ್​​ಎಸ್​​ಎಲ್ ರಿಪೋರ್ಟ್ ಬಗ್ಗೆ ಸಂಜನಾ ಪ್ರತಿಕ್ರಿಯೆ; ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ!

ಸಿಎಫ್​​ಎಸ್​​ಎಲ್ ರಿಪೋರ್ಟ್ ಬಗ್ಗೆ ಸಂಜನಾ ಪ್ರತಿಕ್ರಿಯೆ; ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ!

spot_img
- Advertisement -
- Advertisement -

ಬೆಂಗಳೂರು: ಸಿಎಫ್​​ಎಸ್​​ಎಲ್ ರಿಪೋರ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಸಂಜನಾ ಗಲ್ರಾನಿ , ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಜನಾ ಗಲ್ರಾನಿ ಮೌನ ಮುರಿದಿದ್ದು, ತಮ್ಮ ವರದಿ ಪಾಸಿಟಿವ್​ ಬಂದಿರುವುದರ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ. ನೋವು ನಿವಾರಕ ಮಾತ್ರೆ, ನಿದ್ರೆ ಮಾತ್ರೆ ಸೇರಿದಂತೆ ನಾನು ಪ್ರತಿದಿನ 16 ಮಾತ್ರೆಗಳನ್ನು ಸೇವಿಸುತ್ತಿದ್ದೆ. ಈ ಪ್ರಕರಣ ಶುರುವಾದಾಗಿನಿಂದ ನಿದ್ರಾಹೀನತೆ ಮತ್ತು ಮಾನಸಿಕ ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡುತ್ತಿದ್ದೆ. ಮನೆಗೆ ಬಂದ ತಕ್ಷಣ ನನಗೆ ಶಸ್ತ್ರ ಚಿಕಿತ್ಸೆ ಆಯಿತು ಎಂದು ಅವರು ಬರೆದುಕೊಂಡಿದ್ದಾರೆ.



ಅಳು ನಿಲ್ಲಿಸುವುದಕ್ಕಾಗಿ ಮತ್ತು ನಿದ್ರೆ ಬರಲಿ ಎಂದು ನನಗೆ ಹೆಚ್ಚು ಡೋಸೇಜ್​ ಇರುವ ಮೂಡ್​ ಎಲಿವೇಟರ್​ಗಳನ್ನು ನೀಡಿದ್ದರು. ಮೂರು ತಿಂಗಳ ಕಾಲ ಪ್ರತಿ ದಿನ ನಾನು ಗಂಟೆಗಟ್ಟಲೆ ಅಳುತ್ತಿದ್ದೆ. ಕೆಮಿಕಲ್​ಗಳನ್ನು ಒಳಗೊಂಡ ಈ ಔಷಧಿಗಳನ್ನು ನಾನು ಸೇವಿಸಿರುವುದಕ್ಕೆ ದಾಖಲೆ ಇದೆ. ಹಾಗಾಗಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ವಾಸಿಟಿವ್​ ಅಥವಾ ನೆಗೆಟಿವ್​ ಎಂಬುದು ದೊಡ್ಡ ವಿಚಾರ ಅಲ್ಲ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನ್ಯಾಯ ಸಿಗಲಿದೆ ಎಂದಿದ್ದಾರೆ.



ಪೂರ್ತಿ ವಿವರ ಗೊತ್ತಿಲ್ಲದೇ ನನ್ನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ. ನನ್ನ ಬದುಕು ಸಹಜ ಸ್ಥಿತಿಗೆ ಬರಲಿ ಎಂದು ನಾನು ಬಯಸುತ್ತಿದ್ದೇನೆ. ಈ ವಿಚಾರವನ್ನು ಆಧಾರವಿಲ್ಲದೇ ವೈಭವೀಕರಿಸುವುದರಿಂದ ನನ್ನ ಮಾನಸಿಕ ಶಾಂತಿ ಹಾಳಾಗುತ್ತಿದೆ. ಈ ಕಾಲ ಕೂಡ ಕಳೆದುಹೋಗುತ್ತದೆ. ಆರೋಪಗಳಿಂದ ನನಗೆ ಕಿರುಕುಳ ನೀಡುತ್ತಿರುವವರಿಗೆ ಶಿಕ್ಷೆ ನೀಡುವುದು ಬೇಡ. ಅವರಿಗೆ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಜನಾ ಗಲ್ರಾನಿ ಅವರು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಕಳೆದೆರಡು ಮೂರು ದಿನಗಳಿಂದ್ಲೂ ಎಫ್ ಎಸ್ ಎಲ್ ರಿಪೋರ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರದ ಸಂಜನಾ, ಸದ್ಯ ತಮ್ಮ ಫ್ಯಾನ್ಸ್ ಗ್ರೂಪ್​​, ಮಾಧ್ಯಮಗಳ ವ್ಯಾಟ್ಸಪ್ ಗ್ರೂಪ್​ನಲ್ಲಿ ಮೆಸೆಜ್ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

- Advertisement -
spot_img

Latest News

error: Content is protected !!