- Advertisement -
- Advertisement -
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದೃಢವಾಗಿದೆ.


ಬಂಟ್ವಾಳದ ಕೆಳಗಿನ ಪೇಟೆಯಲ್ಲಿ ಕಳೆದ ಭಾನುವಾರ ಮತ್ತು ಎರಡು ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಮೃತಪಟ್ಟ ಅತ್ತೆ ಮತ್ತು ಸೊಸೆಯ ಮನೆಯ ಆಸುಪಾಸಿನ ಮಹಿಳೆಗೆ ಕೆಲ ದಿನಗಳ ಹಿಂದೆ ಸೋಂಕು ದೃಢ ಪಟ್ಟಿತ್ತು. ಅವರನ್ನು P-489 (ಕೊರೋನಾ ಸೋಂಕಿತರಿಗೆ ನೀಡುವ ಗುರುತಿನ ಸಂಖ್ಯೆ) ಎಂದು ಹೆಸರಿಸಲಾಗಿತ್ತು.
ಇದೀಗ P-489 ರೋಗಿಯ ಸಂಪರ್ಕಕ್ಕೆ ಬಂದಿದ್ದ ಬಂಟ್ವಾಳದ 33 ವರ್ಷದ ಮಹಿಳೆಗೂ ಸೋಂಕು ದೃಢವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
- -ದಕ್ಷಿಣ ಕನ್ನಡ ಜಿಲ್ಲೆಯ 18ನೇ ಪ್ರಕರಣ (2 ಸಾವು, 12 ಗುಣಮುಖ, 4 ಮಂದಿಗೆ ಚಿಕಿತ್ಸೆ)
- -ಬಂಟ್ವಾಳ ತಾಲೂಕಿನ 6ನೇ ಪ್ರಕರಣ (2 ಸಾವು, 2 ಗುಣಮುಖ, 2 ಮಂದಿಗೆ ಚಿಕಿತ್ಸೆ)
- -ಬಂಟ್ವಾಳ ಪೇಟೆಯ ಒಂದೇ ಪರಿಸರದಲ್ಲಿ 4ನೇ ಪ್ರಕರಣ

- Advertisement -