Friday, July 12, 2024
Homeಕರಾವಳಿಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು "ಸತ್ಯ ಧರ್ಮಕ್ಕೆ ಸಂದ ಜಯ" -...

ಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು “ಸತ್ಯ ಧರ್ಮಕ್ಕೆ ಸಂದ ಜಯ” – ಹರೀಶ್ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ:ಜೂ.13: ರಾಜಕೀಯ ಪ್ರೇರಿತವಾಗಿ ಬಿಜೆಪಿ ಯುವ ಮೋರ್ಚಾ ನಾಯಕರಾದ ಶಶಿರಾಜ್ ಶೆಟ್ಟಿಮತ್ತು ಪ್ರಮೋದ್ ಮೇಲೆ ತಾಲೂಕು ಆಡಳಿತ ವ್ಯವಸ್ಥೆ ದಾಖಲಿಸಿದ್ದ ಸುಳ್ಳು ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದು ಸತ್ಯ ಧರ್ಮಕ್ಕೆ ಸಂದ ಜಯವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.

   ರಾಜಕೀಯವಾಗಿ ಮುಂಚೂಣಿಗೆ ಬರುತ್ತಿರುವ ಉದಯೋನ್ಮಖ ನಾಯಕರ ಮನೋಸ್ಥೈರ್ಯವನ್ನು ಕುಗ್ಗಿಸುವ ದುರುದ್ದೇಶದಿಂದ ಕಾಂಗ್ರೆಸ್ ದ್ವೇಷ ರಾಜಕೀಯ ಪ್ರೇರಿತ ಬಂಧನದಿಂದ ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ರಾತ್ರಿ ಕಳೆದ ಮೇಲೆ ಬೆಳಕು ಹರಿಯುವಂತೆ ಒಂದಲ್ಲ ಒಂದು ದಿನ ನ್ಯಾಯ ದೊರಕಲೇಬೇಕು. ಬಿಜೆಪಿ ಇಂತಹ ಕುಕೃತ್ಯಗಳಿಗೆ ಧೃತಿಗೆಡದೆ ಸತ್ಯ ಧರ್ಮದ ಹಾದಿಯಲ್ಲೇ ಕಾನೂನು ಪ್ರಕಾರ ಇಂತಹ ಸುಳ್ಳು ಪ್ರಕರಣಗಳ ಆಪಾದನೆಯನ್ನು ಮೆಟ್ಟಿನಿಂತು ಹೊರ ಬರಲಿದೆಯೆಂಬ ವಿಶ್ವಾಸವನ್ನು  ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

- Advertisement -
spot_img

Latest News

error: Content is protected !!