Wednesday, June 3, 2026
Homeಕರಾವಳಿಉಡುಪಿಉಡುಪಿ: ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ದಿಢೀರ್ ನಾಪತ್ತೆ

ಉಡುಪಿ: ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ದಿಢೀರ್ ನಾಪತ್ತೆ

- Advertisement -
- Advertisement -

ಉಡುಪಿ:  ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿಯೊಂದು ದಿಢೀರ್ ನಾಪತ್ತೆಯಾದ ಘಟನೆ  ಪಡುಬಿದ್ರೆಯಲ್ಲಿ ನಡೆದಿದೆ.

 ಶಿಫಾಶೇಖ್‌ (25) ಹಾಗೂ ರಿಯಾಜ್‌ (28) ನಾಪತ್ತೆಯಾದ ಜೋಡಿ.  ನಂದಿಕೂರು-ಅಡ್ವೆಯ ಮನೆಯಿಂದ ಉಡುಪಿಗೆ ಮೊಬೈಲ್‌ ಖರೀದಿಸಿ ಬರುವುದಾಗಿ ಹೇಳಿ ಆ. 1ರಂದು ಹೋದ ಇವರಿಬ್ಬರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಜ್‌ ಮಣಿಪಾಲದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ಶೇಖ್‌ ತಂದೆ-ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದರು. ಆ ವೇಳೆ ಬಿಎಎಂಎಸ್‌ ಕಡೆಯ ವರ್ಷದಲ್ಲಿ ಓದುತ್ತಿದ್ದ ಈಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ರಿಯಾಜ್‌ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಎರಡೂವರೆ ತಿಂಗಳ ಅವರ ಮಗುವೂ ತೀರಿಕೊಂಡಿತ್ತು.

ಈಗ ರಿಯಾಜ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಶಿಫಾ ಮೊಬೈಲನ್ನು ಮನೆಯಿಂದ ತೆಗೆದುಕೊಂಡು ಹೋಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!