Saturday, June 6, 2026
Homeಕರಾವಳಿವಿಟ್ಲ: ದಂಪತಿ ಮೇಲೆ ಹಲ್ಲೆ ನಡೆಸಿದ ಯುವಕರು: ಇಬ್ಬರು ಆರೋಪಿಗಳ ಬಂಧನ

ವಿಟ್ಲ: ದಂಪತಿ ಮೇಲೆ ಹಲ್ಲೆ ನಡೆಸಿದ ಯುವಕರು: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ವಿಟ್ಲ: ಯುವಕರು ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಸಾಲೆತ್ತೂರು‌ ಗ್ರಾಮದ ಪಾಲ್ತಾಜೆ ನಿವಾಸಿ ಜಯಂತ ಅವರು ಜೂ.25ರಂದು ರಾತ್ರಿ ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಸಾಲೆತ್ತೂರಿನ ವೈನ್ ಶಾಪ್ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದ ಸುದರ್ಶನ್,ಶರತ್,ಧನು ಮತ್ತು ಉದಯ ಎಂಬವರು ನಮ್ಮ ಆಟೋ ರಿಕ್ಷಾವನ್ನು ತಡೆದು‌ ನಿಲ್ಲಿಸಿ ಜಯಂತ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮುನ್ನ ಯಾನೆ ಸುದರ್ಶನ, ಶರತ್‌, ಧನರಾಜ್, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್ ಮತ್ತು ಧನರಾಜ್ ನನ್ನು ಬಂಧಿಸಲಾಗಿದೆ.ಇವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಜಯಂತ ಅವರು ನೀಡಿರುವ ದೂರು ತಿಳಿಸಿದ್ದಾರೆ.

- Advertisement -

Latest News

error: Content is protected !!