Sunday, June 28, 2026
Homeತಾಜಾ ಸುದ್ದಿತಮ್ಮ ಹುಟ್ಟಹಬ್ಬದಂದು ನಟ, ನಿರೂಪಕ ಅಕುಲ್ ಬಾಲಾಜಿಗೆ  ದುಬಾರಿ ಬೈಕ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್

ತಮ್ಮ ಹುಟ್ಟಹಬ್ಬದಂದು ನಟ, ನಿರೂಪಕ ಅಕುಲ್ ಬಾಲಾಜಿಗೆ  ದುಬಾರಿ ಬೈಕ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್

- Advertisement -
- Advertisement -

ಬೆಂಗಳೂರು; ಹುಟ್ಟುಹಬ್ಬದ ದಿನ ಬರ್ತಡೇ ಆಚರಿಸಿಕೊಳ್ಳುವವರಿಗೆ ಉಡುಗೊರೆಗಳನ್ನು ನೀಡೋದು ಸಾಮಾನ್ಯ. ಆದ್ರೆ ನಟ ಕಿಚ್ಚ ಸುದೀಪ್ ತಮ್ಮ ಬರ್ತಡೇಯಂದು ನಟ, ನಿರೂಪಕ ಅಕುಲ್ ಬಾಲಾಜಿ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನದಂದೇ ಅಕುಲ್ ಗೆ ದುಬಾರಿ ಬೈಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಕಿಚ್ಚ ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ನಿಂತು ಅಕುಲ್ ವಿಡಿಯೋ ಒಂದನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ.

”ನಿನ್ನೆ ಮೊನ್ನೆ ಗಣೇಶೋತ್ಸವ ಆಯ್ತಲ್ಲ ಹಾಗೆ ಇಂದು ಕಿಚ್ಚೋತ್ಸವ. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಅದುವೇ ಈ ಸುಂದರವಾದ ಬೈಕ್. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ” ಎಂದಿದ್ದಾರೆ ಅಕುಲ್ ಬಾಲಾಜಿ. ವಿಡಿಯೋದಲ್ಲಿ ನಟ ಸುದೀಪ್ ಸಹ ಇದ್ದು, ಅಕುಲ್‌ ಅನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.

ಬಿಎಂಡಬ್ಲುನ ಬೈಕ್ ಅನ್ನು ಕಿಚ್ಚ ಅಕುಲ್‌ ಬಾಲಾಜಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಎಂಡಬ್ಲು ಬೈಕ್‌ನ ಬೆಲೆ ಕನಿಷ್ಟ 3 ರಿಂದ ಐದು ಲಕ್ಷ ಎನ್ನಲಾಗುತ್ತದೆ. KA 05 KR 3666 ನೋಂದಣಿ ಸಂಖ್ಯೆಯ ಈ ಬೈಕ್ 2019 ರಲ್ಲಿ  ಬೆಂಗಳೂರು ದಕ್ಷಿಣನಲ್ಲಿ ನೋಂದಣಿ ಆಗಿದ್ದು, ಬೈಕ್ ಪ್ರಸ್ತುತ ಅಕುಲ್ ಬಾಲಾಜಿ ಹೆಸರಿನಲ್ಲಿದೆ.

- Advertisement -

Latest News

error: Content is protected !!