Thursday, June 4, 2026
Homeಕರಾವಳಿಶಿರಾಡಿಘಾಟ್‌ನ ರಾಜ್‌ಘಾಟ್ ಸಮೀಪ ಕೆಂಪುಹೊಳೆ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಶಿರಾಡಿಘಾಟ್‌ನ ರಾಜ್‌ಘಾಟ್ ಸಮೀಪ ಕೆಂಪುಹೊಳೆ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

- Advertisement -
- Advertisement -

ಗುಂಡ್ಯ: ಮಹಿಳೆಯೋರ್ವರ ಶವ ಕೊಳೆತ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನ ರಾಜ್‌ಘಾಟ್ ಸಮೀಪ ಕೆಂಪುಹೊಳೆ ಅರಣ್ಯದಲ್ಲಿ ಪತ್ತೆಯಾಗಿದೆ.

ಮಹಿಳೆಯ ಕೊಳೆತ ಶವ ಮಕಾಡೆ ಮಲಗಿದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ವಯಸ್ಸು ಅಂದಾಜು 30 ರಿಂದ 35.

ಸಕಲೇಶಪುರದಿಂದ ಗುಂಡ್ಯಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ನಂದೀಶ್ ಎಂಬವರು, ಶಿರಾಡಿ ಘಾಟ್‌ನ ರಾಜ್‌ಘಾಟ್ ಸಮೀಪ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬೈಕ್ ನಿಲ್ಲಿಸಿ ಪಕ್ಕ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಮೃತದೇಹವನ್ನು ಸಕಲೇಶಪುರ ಕ್ರಾಪರ್ಡ್ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಬಗ್ಗೆ ಗಿರೀಶ್‌ರವರು ನೀಡಿದ ದೂರಿನಂತೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಹೆಂಗಸಿನ ವಾರಸುದಾರರು ಇದುವರೆಗೂ ಪತ್ತೆಯಾಗಿಲ್ಲ. ಯಾವುದಾದರೂ ಹೆಂಗಸು ಕಾಣೆಯಾದ ಪ್ರಕರಣಗಳಿದ್ದಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆ ಫೋನ್ ೦೮೧೭೩-೨೪೫೧೮೩, ಮೊಬೈಲ್ ನಂ. ೯೪೮೦೮೦೪೭೬೧ಗೆ ಸಂಪರ್ಕಿಸುವಂತೆ ಪ್ರಕಟಣೆ ನೀಡಲಾಗಿದೆ.

- Advertisement -

Latest News

error: Content is protected !!