Monday, June 8, 2026
Homeಕರಾವಳಿಉಡುಪಿದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಕೊರೊನಾ ಅಟ್ಟಹಾಸ, ಉಡುಪಿಯಲ್ಲಿ ಕೊಂಚ ಕಮ್ಮಿಯಾದ ಕೋವಿಡ್ ಆರ್ಭಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಕೊರೊನಾ ಅಟ್ಟಹಾಸ, ಉಡುಪಿಯಲ್ಲಿ ಕೊಂಚ ಕಮ್ಮಿಯಾದ ಕೋವಿಡ್ ಆರ್ಭಟ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು ಕೊರೊನಾ ಭರ್ಜರಿಯಾಗಿ ಆರ್ಭಟಿಸಿದೆ. ಒಂದೇ ದಿನ 448 ಹೊಸ ಕೇಸುಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 11,837ಕ್ಕೇರಿದೆ. ಇನ್ನು ಜಿಲ್ಲೆಯಲ್ಲಿ ಇಂದು 6 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2521 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 8,973 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ ಒಟ್ಟು 341 ಮಂದಿ ಬಲಿಯಾಗಿದ್ದಾರೆ. ಇನ್ನು ಇಂದು 293 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಹಾಗೇ ಉಡುಪಿಯಲ್ಲಿಂದು 176 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 11.089ಕ್ಕೇರಿದೆ. ಇಂದು ಕೊರೊನಾಗೆ 2 ಮಂದಿ ಬಲಿಯಾಗಿದ್ದು,187 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,733 ಸಕ್ರಿಯ ಪ್ರಕರಣಗಳಿದ್ದು,8,262 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 94 ಮಂದಿ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!