Saturday, May 4, 2024
Homeಕರಾವಳಿಕೇರಳದಿಂದ ಪುತ್ತೂರಿಗೆ ಸಂಬಂಧಿಕರ ಮನೆಗೆ ಯಾರಾದ್ರು ಬಂದರೆ ಮನೆ ಮಂದಿಗೆಲ್ಲಾ ಕೊರೊನಾ ಟೆಸ್ಟ್

ಕೇರಳದಿಂದ ಪುತ್ತೂರಿಗೆ ಸಂಬಂಧಿಕರ ಮನೆಗೆ ಯಾರಾದ್ರು ಬಂದರೆ ಮನೆ ಮಂದಿಗೆಲ್ಲಾ ಕೊರೊನಾ ಟೆಸ್ಟ್

spot_img
- Advertisement -
- Advertisement -

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಯಾವ ರೀತಿ ಏರಿಕೆಯಾಗುತ್ತಿದೆ ಎಂಬುವುದನ್ನು ಕಳೆದ ಕೆಲವು ದಿನಗಳಿಂದ ನಾವು ಗಮನಿಸುತ್ತಲೇ ಇದ್ದೇವೆ. ಇನ್ನು ನಿನ್ನೆ ರಾಜ್ಯದಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರದಿಯಾಗಿತ್ತು. ಅತ್ತ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಪರಿಣಾಮ ದಕ್ಷಿಣಕನ್ನಡದಲ್ಲೂ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ಬರುವವರ ಬಗ್ಗೆ ಪುತ್ತೂರು ತಾಲೂಕಿನಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ.

ಕೇರಳದ ಕಾಸರಗೋಡಿನಿಂದ ಪುತ್ತೂರಿನ ನೆಂಟರ ಮನೆಗೆ ಯಾರಾದರೂ ಭೇಟಿ ನೀಡಿದ್ದೇ ಆದಲ್ಲಿ ಆ ಮನೆಯ ಸದಸ್ಯರೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಚಿಂತನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಕಾಸರಗೋಡು ತಾಲೂಕಿನ ಅಡೂರು, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ನೆಟ್ಟಣಿಗೆ, ಪಡ್ರೆ ಮತ್ತಿತರ ಕಡೆಗಳಿಂದ ಪುತ್ತೂರಿಗೆ ನಿರಂತರ ಜನ ಸಂಪರ್ಕವಿದೆ. ಬಸ್ ಸೌಲಭ್ಯ ಇಲ್ಲದಿದ್ದರೂ ಖಾಸಗಿ ವಾಹನಗಳಲ್ಲಿ ಅಲ್ಲಿನ ಜನರು ಪುತ್ತೂರು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ಕೊಡುತ್ತಿದ್ದಾರೆ. ಕಾಸರಗೋಡಿನ ಸಂಪರ್ಕವನ್ನು ಕಡಿತಗೊಳಿಸದಿದ್ದರೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲೂ ಕೊರೋನ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ. 

ಕಾಸರಗೋಡು ತಾಲೂಕಿನಿಂದ ಪುತ್ತೂರನ್ನು ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಕಟ್ಟುನಿಟ್ಟಿನ ತಪಾಸಣೆಯನ್ನು ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯವರು ನಡೆಸುತ್ತಿದ್ದಾರೆ. 72 ತಾಸುಗಳ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಕರ್ನಾಟಕವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪುತ್ತೂರು ತಾಲೂಕಿನ ಯಾವ ಗ್ರಾಮಕ್ಕೆ ಕಾಸರಗೋಡಿನಿಂದ ಆಗಮಿಸಿದ್ದಾರೆ ಮತ್ತು ಇಲ್ಲಿ ಅವರು ಭೇಟಿ ನೀಡುವ ಮನೆಯ ವಿಳಾಸ ಹಾಗೂ ಮನೆಯ ಯಜಮಾನನ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಲಾಗುತ್ತಿದೆ. ಯಾಕೆಂದರೆ ನೆಗೆಟಿವ್ ವರದಿ ಇದ್ದು ಕಾಸರಗೋಡಿನಿಂದ ಇಲ್ಲಿಗೆ ಭೇಟಿ ನೀಡಿದ್ದರೂ ಅವರು ಭೇಟಿ ನೀಡಿದ ಮನೆಯವರನ್ನು ಕೊರೋನ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!