Saturday, June 6, 2026
Homeಕರಾವಳಿಉಡುಪಿಮಣಿಪಾಲ: ಕ್ವಾರೆಂಟಿನ್ ನಲ್ಲಿದ್ದ ಕೊರೋನಾ ಶಂಕಿತ ವ್ಯಕ್ತಿ ಸಾವು

ಮಣಿಪಾಲ: ಕ್ವಾರೆಂಟಿನ್ ನಲ್ಲಿದ್ದ ಕೊರೋನಾ ಶಂಕಿತ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕ್ವಾರೆಂಟಿನ್ ನಲ್ಲಿದ್ದ ಕುಂದಾಪುರ ಮೂಲದ 53 ವರ್ಷದ ವ್ಯಕ್ತಿಯೊರ್ವವರು ಗುರುವಾರ ಮೃತಪಟ್ಟಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ತಗುಲಿದೆಯೇ ಎಂಬುದು ಇನ್ನು ಖಚಿತಗೊಂಡಿಲ್ಲ.

ಮೇ 5ರಂದು ಮುಂಬೈಯಿಂದ ತನ್ನ ಹುಟ್ಟೂರಾದ ಕುಂದಾಪುರಕ್ಕೆ ಬಂದಿದ್ದ ಈ ವ್ಯಕ್ತಿಯನ್ನು ಕ್ವಾರೆಂಟಿನ್ ನಲ್ಲಿ ಇಡಲಾಗಿತ್ತು. ಹೃದಯ ಸಂಬಂದಿ ಸಮಸ್ಯೆಗಳಿಂದ ಬಳಲುತ್ತಿದ್ದ ಇವರು ಕ್ವಾರೆಂಟಿನ್ ನಲ್ಲಿ ಸಮಯದಲ್ಲಿ ಅಸ್ವಸ್ಥರಾದ ಕಾರಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೃತಪಟ್ಟ ವ್ಯಕ್ತಿಗೆ ಕೊರೋನಾ ತಗುಲಿರುವ ಶಂಕೆ ಇರುವ ಕಾರಣ, ಗಂಟಲ ದ್ರವವನ್ನು ಪರೀಕ್ಷೆಗಾಗಿ ಮಂಗಳೂರು ಕೋವಿಡ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ನೀರಿಕ್ಷೆ ಮಾಡಲಾಗುತ್ತಿದೆ ಎಂದು ಅರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ದಿನದಿಂದ ಆಸ್ಪತ್ರೆಯಲ್ಲಿ ಕಾರ್ಯವಿರ್ವಹಿಸುತ್ತಿದ್ದ ವೈದ್ಯರನ್ನು, ನರ್ಸ್, ಸ್ವಚ್ಚತಾ ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

- Advertisement -

Latest News

error: Content is protected !!