Monday, April 29, 2024
Homeತಾಜಾ ಸುದ್ದಿಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಫ್ಲ್ಯಾಶ್ ಮಾಬ್..

ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಫ್ಲ್ಯಾಶ್ ಮಾಬ್..

spot_img
- Advertisement -
- Advertisement -

ಬಳ್ಳಾರಿ : ಕೊರೊನಾ ಅನ್ನೋ ಹೆಮ್ಮಾರಿಯಿಂದ ನಮ್ಮನ್ನು ನಾವು ಸೇವ್ ಮಾಡಿಕೊಳ್ಳೋದಕ್ಕೆ ಇರುವ ಸದ್ಯದ ಅಸ್ತ್ರ ಅಂದ್ರೆ ಧೈರ್ಯ ಒಂದೇ. ಧೈರ್ಯದಿಂದ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನು ಸೇವನೆ ಮಾಡೋದರಿಂದ ಖಂಡಿತವಾಗಿ ಕೋವಿಡ್ ನ್ನು ಸುಲಭವಾಗಿ ಮಣಿಸಬಹುದು.

ಕೋವಿಡ್ ಗೆ ಆಸ್ಪತ್ರೆಗಳಲ್ಲೂ ನಿರ್ದಿಷ್ಟ ಚಿಕಿತ್ಸೆ ಇಲ್ಲದೇ ಇರೋದರಿಂದ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಬೇಕಾಗುತ್ತದೆ. ಕೊರೊನಾ ಪಾಸಿಟಿವ್ ಇದ್ದರೂ ಕೆಲವರು ಆರೋಗ್ಯವಾಗಿಯೇ ಇರುತ್ತಾರೆ. ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಕೊರೊನಾ ಸೋಂಕಿತರು ಬಹುತೇಕರು ಸೋಂಕು ಬೇರೆಯವರಿಗೆ ಹರಡಬಾರದು ಅನ್ನೋ ಕಾರಣಕಷ್ಟೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೇ ಕೋವಿಡ್ ಸೋಂಕಿತರು ಕೂಡ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿತರು ಎಲ್ಲರೂ ಒಟ್ಟಾಗಿ ಫ್ಲ್ಯಾಶ್ ಮಾಬ್ ಮಾಡುವ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದಾರೆ. ಮಸ್ತ್ ಮಸ್ತ್ ಹುಡುಗಿ ಬಂದಳು ಎಂಬ ಹಾಡಿಗೆ ಸಖತ್ತಾಗೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!