Tuesday, July 1, 2025
HomeUncategorizedಕರ್ನಾಟಕದಲ್ಲಿ ಇಂದು ತ್ರಿಶತಕ ಭಾರಿಸಿದ ಕೊರೋನಾ: ದ.ಕ ದಲ್ಲಿ 14, ಮತ್ತು ಉಡುಪಿಯಲ್ಲಿ 10 ಮಂದಿಗೆ...

ಕರ್ನಾಟಕದಲ್ಲಿ ಇಂದು ತ್ರಿಶತಕ ಭಾರಿಸಿದ ಕೊರೋನಾ: ದ.ಕ ದಲ್ಲಿ 14, ಮತ್ತು ಉಡುಪಿಯಲ್ಲಿ 10 ಮಂದಿಗೆ ಸೋಂಕು ದೃಢ

spot_img
- Advertisement -
- Advertisement -

ಮಂಗಳೂರು: ಕೋವಿಡ್-19 ಸೋಂಕಿತರ ಸಂಖ್ಯೆ ಕರಾವಳಿಯಲ್ಲಿ ಮತ್ತಷ್ಟು ಹೆಚ್ಚುತ್ತಿದೆ. ಇಂದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮತ್ತು ಉಡುಪಿ ಜಿಲ್ಲೆಯಲ್ಲಿ 10 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢಪಟ್ಟಿದೆ. ಇದರಿಂದ ಉಡುಪಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ.

ಅನ್ಯ ರಾಜ್ಯದ ಪ್ರಯಾಣಿಕರಿಂದ ಹೆಚ್ಚಿನ ಸೋಂಕು ಪ್ರಕರಣ ಪತ್ತೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದಿರುವ ಪ್ರಯಾಣಿಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢವಾಗುತ್ತಿದೆ.

ರಾಜ್ಯದಲ್ಲಿ ಇಂದು ದಾಖಲೆಯ 299 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ. ಇವರಲ್ಲಿ 1218 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 1950 ಆಗಿದೆ.

ಇಂದು ಬೆಂಗಳೂರು ನಗರ -21,
ಯಾದಗರಿ-44, ಕಲಬುರ್ಗಿ -28,
ಮಂಡ್ಯ – 13, ರಾಯಚೂರು – 83,
ಉಡುಪಿ -10, ಬೀದರ್ – 33,
ಬೆಳಗಾವಿ – 13,
ದಾವಣಗೆರೆ -06,
ದಕ್ಷಿಣ ಕನ್ನಡ – 14,
ವಿಜಯಪುರ – 26,
ಉತ್ತರ ಕನ್ನಡ – 05,
ಬಳ್ಳಾರಿ -01,
ಶಿವಮೊಗ್ಗ -01,
ಕೋಲಾರ -01 ಕೊರೋನಾ ಸೋಂಕು ತಗಲುವ ಮೂಲಕ ಇಂದು 299 ಜನರಿಗೆ ಕೊರೋನಾ ದೃಢಪಟ್ಟಿದೆ.

ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾದ್ರೇ, 1218 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -
spot_img

Latest News

error: Content is protected !!