Friday, June 5, 2026
Homeಕರಾವಳಿಉಡುಪಿಕರಾವಳಿಯಲ್ಲಿ ಕೊರೋನಾ ಆರ್ಭಟ: ಉಡುಪಿ 21 ಮತ್ತು ದ.ಕದಲ್ಲಿ 5 ಹೊಸ ಪ್ರಕರಣ ಪತ್ತೆ

ಕರಾವಳಿಯಲ್ಲಿ ಕೊರೋನಾ ಆರ್ಭಟ: ಉಡುಪಿ 21 ಮತ್ತು ದ.ಕದಲ್ಲಿ 5 ಹೊಸ ಪ್ರಕರಣ ಪತ್ತೆ

- Advertisement -
- Advertisement -

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಇಂದು ಮತ್ತೆ ಉಡುಪಿ ಜಿಲ್ಲೆಯಲ್ಲಿ 21 ಜನರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 05 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಇಂದು ರಾಜ್ಯದಲ್ಲಿ ಮತ್ತೆ 176 ಜನರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆ ಕಂಡಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ 42 ಜನರಿಗೆ ಸೋಂಕು ದೃಢವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 22 ಜನರಿಗೆ ಸೋಂಕು ದೃಢವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಜನರಿಗೆ 21 ಕೋವಿಡ್-19 ಸೋಂಕು ಪತ್ತೆಯಾಗಿದೆ.

ಬೀದರ್ ನಲ್ಲಿ 20 ಜನರಿಗೆ ಸೋಂಕು ತಾಗಿದ್ದರೆ, ಕಲಬುರಗಿಯಲ್ಲಿ 13, ಧಾರವಾಡದಲ್ಲಿ 10, ಬಳ್ಳಾರಿಯಲ್ಲಿ ಎಂಟು, ಕೋಲಾರದಲ್ಲಿ ಏಳು, ಉತ್ತರ ಕನ್ನಡ ಜಲ್ಲೆಯಲ್ಲಿ ಆರು, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಐವರಿಗೆ ಸೋಂಕು ತಾಗಿರುವುದು ದೃಢವಾಗಿದೆ.

ಇಂದು ಸೋಂಕಿನ ಕಾರಣದಿಂದ ಒಟ್ಟು ಐದು ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ ಮೂವರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!