Tuesday, April 30, 2024
Homeಕರಾವಳಿಮಂಗಳೂರು : ಬರಕಾ ಇಂಟರ್ ‌ನ್ಯಾಷನಲ್ ಶಿಕ್ಷಣ ಸಂಸ್ಥೆಯಿಂದ 'ಶಾಲಾ ಶುಲ್ಕ ರಿಯಾಯಿತಿ'

ಮಂಗಳೂರು : ಬರಕಾ ಇಂಟರ್ ‌ನ್ಯಾಷನಲ್ ಶಿಕ್ಷಣ ಸಂಸ್ಥೆಯಿಂದ 'ಶಾಲಾ ಶುಲ್ಕ ರಿಯಾಯಿತಿ'

spot_img
- Advertisement -
- Advertisement -

ಮಂಗಳೂರು : ಮಾರಕ ಕೊರೊನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಂದ ಪೋಷಕರಿಗೆ ಉಂಟಾಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ಹೊರವಲಯದ ಅಡ್ಯಾರು ಸಮೀಪದ ಬರಕಾ ಇಂಟರ್ ‌ನ್ಯಾಷನಲ್ ಶಿಕ್ಷಣ ಸಂಸ್ಥೆಯು 2020-21ನೇ ಸಾಲಿನ ಶಾಲಾ ಮಕ್ಕಳ ಶುಲ್ಕದಲ್ಲಿ ಶೇ.33 ರಿಯಾಯಿತಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಸ್ಥೆಯ ಆಡಳಿತ ಮಂಡಳಿ , ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ನಂತರ ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ.
ಪ್ರಸಕ್ತ ಆರ್ಥಿಕ ಸಂಕಷ್ಟದ ಸನ್ನಿವೇಶದಲ್ಲಿ ಶಾಲೆ ಕೈಗೊಂಡಿರುವ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ವಿಶೇಷ ಪ್ರಶಂಸೆಗೆ ಪಾತ್ರ ವಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸದಾ ಬಧ್ಧವಾಗಿರುವ ಸಂಸ್ಥೆಯು ಶಿಕ್ಷಕರ ವೇತನ, ಐಟಿ ಸಾಫ್ಟ್ ವೇರ್, ಸ್ಮಾರ್ಟ್ ‌ಕ್ಲಾಸ್ ಇತ್ಯಾದಿ ಖರ್ಚುಗಳ ಮಧ್ಯೆ ಕೈಗೊಂಡ ಈ ನಿರ್ಧಾರವು ಸಂಸ್ಥೆಗೆ ದೊಡ್ಡ ಹೊರೆಯಾಗಿದ್ದರೂ ಕೂಡ ಪೋಷಕರ ಪ್ರಸಕ್ತ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವುದು ಅನಿವಾರ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ತಿಳಿಸಿರುತ್ತಾರೆ.

- Advertisement -
spot_img

Latest News

error: Content is protected !!