Sunday, June 29, 2025
Homeತಾಜಾ ಸುದ್ದಿನ.17 ರಿಂದ ಕಾಲೇಜುಗಳು ಆರಂಭ: ಕ್ಲಾಸ್ ಗೆ ಹೋಗುವ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ

ನ.17 ರಿಂದ ಕಾಲೇಜುಗಳು ಆರಂಭ: ಕ್ಲಾಸ್ ಗೆ ಹೋಗುವ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ

spot_img
- Advertisement -
- Advertisement -

ಬೆಂಗಳೂರು: ನವೆಂಬರ್ 17 ರಿಂದ ಕಾಲೇಜುಗಳನ್ನು ಆರಂಭೋದಕ್ಕೆ ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಜೊತೆಗೆ ಒಂದಷ್ಟು ಕೊರೊನೊ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

ಆ ಮಾರ್ಗಸೂಚಿಗಳು ಇಂತಿವೆ

*ಕಾಲೇಜು ಆರಂಭಕ್ಕೆ 3 ದಿನ ಮೊದಲು ಬೋಧಕರು, ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೊನಾ ಟೆಸ್ಟ್  ಕಡ್ಡಾಯ

*ಬೋಧಕರು ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು

*ಅವಶ್ಯಕತೆ ಇದ್ದರೆ ಪಾಳಿ ವ್ಯವಸ್ಥೆಯಲ್ಲಿ ಬೋಧನಾ ವ್ಯವಸ್ಥೆ

*ಕೆಮ್ಮು, ಜ್ವರ ಲಕ್ಷಣಗಳು ಇದ್ದರೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ.

 *ಪ್ರವೇಶ, ನಿರ್ಗಮನ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ವ್ಯವಸ್ಥೆ

*ಕಾಲೇಜ್ ಆವರಣದಲ್ಲಿ ಲೈಬ್ರರಿ, ಕ್ಯಾಂಟೀನ್ ತೆರೆಯುವಂತಿಲ್ಲ.

*ವಿದ್ಯಾರ್ಥಿಗಳು ಮನೆಯಿಂದಲೇ ಊಟ, ನೀರಿನ ಬಾಟಲಿ ತರಬೇಕು.

*ಕಾಲೇಜಿನಲ್ಲಿ ಸಾಮಾಜಿಕ ಅಂತರ ಅಗತ್ಯ

*ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ

* ಕಾಲೇಜಿಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ.

* ಕಾಲೇಜಿಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ

* ಕಾಲೇಜ್‍ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, NCC, NSS ಚಟುವಟಿಕೆಗಳು ಬಂದ್

ಈ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.

- Advertisement -
spot_img

Latest News

error: Content is protected !!