Friday, September 13, 2024
Homeಕರಾವಳಿಕೊರೋನಾ ಪ್ರಭಾವ: ಸರಳ ರೀತಿಯಲ್ಲಿ ಮದುವೆಯಾದ ಬೆಳ್ತಂಗಡಿಯ ನವ ಜೋಡಿ

ಕೊರೋನಾ ಪ್ರಭಾವ: ಸರಳ ರೀತಿಯಲ್ಲಿ ಮದುವೆಯಾದ ಬೆಳ್ತಂಗಡಿಯ ನವ ಜೋಡಿ

spot_img
- Advertisement -
- Advertisement -

ಬೆಳ್ತಂಗಡಿ: ಮಹಾಮಾರಿ ಕರೊನಾ ವೈರಸ್ ನಿಂದಾಗಿ ಅದೆಷ್ಟೋ ಶುಭ ಕಾರ್ಯಕ್ರಮಗಳು ರದ್ದುಗೊಂಡಿದೆ. ಸಾವಿರ ಕನಸುಗಳನ್ನು ಕಟ್ಟಿಕೊಂಡು ಶುಭ ಘಳಿಗೆಗೆ ಕಾಯುತ್ತಿದ್ದವರು ವಿವಾಹ ಕಾರ್ಯಕ್ರಮವನ್ನು ಮುಂದೂಡಿದ್ದಾರೆ .ಆದರೆ ಇದೆಲ್ಲದರ ನಡುವೆ ತಾಲೂಕಿನ ಮಲವಂತಿಗೆ ಗ್ರಾಮದಲ್ಲಿ ಮನೆಯಲ್ಲಿಯೇ ಸರಳ ವಿವಾಹವೊಂದು ನಡೆದಿದೆ.

ನಿಗದಿಪಡಿಸಿದ ದಿನದಂತೆ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಖಾಸಗಿ ಬ್ಯಾಂಕ್ ಒಂದರಲ್ಲಿ ಉದ್ಯೋಗದಲ್ಲಿರುವ ಮಲವಂತಿಗೆ ಗ್ರಾಮದ ಪವನ್ ಕುಮಾರ್ ಹಾಗೂ ನೆರಿಯ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿರುವ ವಿದ್ಯಾ ಅವರ ವಿವಾಹ ತಾಲೂಕಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಇಂದು ನಡೆಯಬೇಕಾಗಿತ್ತು.

ಆದರೆ ಕರೊನಾ ವೈರಸ್ ನಿಂದ ಇಡೀ ದೇಶವೇ ಲಾಕ್ ಡೌನ್ ಮಾಡಬೇಕಾದ ಆದೇಶ ಬಂದಿದ್ದರಿಂದ ಮದುವೆ ಮುಂದೂಡಬೇಕಾದ ಆತಂಕ ಎದುರಾಗಿತ್ತು. ಈ ಸಂದರ್ಭ ಎರಡು ಮನೆಯವರು ಮಾತುಕತೆ ನಡೆಸಿ ವರನ ಮನೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸುವ ತೀರ್ಮಾನ ಮಾಡಿದರು.‌ ಅದರಂತೆ ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು.
ವರನ ಮತ್ತು ವಧುವಿನ ಕುಟುಂಬದ ಕೆಲವು ಪ್ರಮುಖರಷ್ಟೇ ಪಾಲ್ಗೊಂಡಿದ್ದರು ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಕಾರ್ಯಕ್ರಮ ನಡೆಸಲಾಯಿತು.

- Advertisement -
spot_img

Latest News

error: Content is protected !!