- Advertisement -
- Advertisement -
ಬೆಂಗಳೂರು:ಲಾಕ್‌ಡೌನ್ ಆದೇಶ ಇದ್ದಾಗಿಯೂ ಕೂಡ ನಟಿ ಶರ್ಮಿಳಾ ಮಾಂಡ್ರೆ ಐಷಾರಾಮಿ ಕಾರಿನೊಂದಿಗೆ ರಸ್ತೆಗೆ ಇಳಿದು ಅಪಘಾತ ಮಾಡಿಕೊಂಡಿದ್ದಾರೆ. ಇವೆಲ್ಲದರ ನಡುವೆ ಅಪಘಾತವಾದ ಬಳಿಕ ಅವರು ತಲೆಮರೆಸಿಕೊಂಡಿದ್ದು, ಅವರ ವಿರುದ್ದ ಡ್ರಿಂಕ್ ಡ್ರೈವ್ ಅರೋಪ ಕೂಡ ಕೇಳಿ ಬರುತಿತ್ತು, ಇವೆಲ್ಲದರ ನಡುವೆ ಘಟನೆ ನಡೆದ ಮೂರು ದಿವಸದ ಬಳಿಕ ನಟಿ ಶರ್ಮಿಳಾ ಮಾಂಡ್ರೆ ಮಾಧ್ಯಮಗಳ ಮುಂದೆ ಹಾಜರಾಗಿದ್ದು ಅಂದು ನಡೆದಿದೆ ಎನ್ನಲಾದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ಹೇಳಿರೋದು ಏನು?
ನನಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿತು. ಈ ವೇಳೇಯಲ್ಲಿ ಹೊರಗೆ ಓಡಾಡುವಂತಹ ಪಾಸ್‌ಗಳು ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಅವರ ಬಳಿ ಇತ್ತು ಅವರೊಂದಿಗೆ ನಾನು ಹೋಗುವಾಗ ಈ ಅಪಘಾತ ಸಂಭವಿಸಿದೆ ಅಂತ ಹೇಳಿದ್ದಾರೆ. ಇನ್ನು ನಾನು ಯಾವುದೇ ಪಾರ್ಟಿ ಮಾಡಿಲ್ಲ. ಲಾಕ್‌ಡೌನ್ ನಂತರ ಸಂಪೂರ್ಣ ಮನೆಯಲ್ಲೇ ಇದ್ದೇನೆ. ಅಂತ ಹೇಳಿಕೊಂಡಿದ್ದಾರೆ.
- Advertisement -