Thursday, June 4, 2026
Homeಕರಾವಳಿಉಡುಪಿಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ

- Advertisement -
- Advertisement -

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತವಾದ ಘಟನೆ ಉಡುಪಿ ನಗರದ ಹೊರವಲಯದಲ್ಲಿ ಸಂಭವಿಸಿದೆ.

ಬ್ರಹ್ಮಾವರದ ಖಾಸಗಿ ಶಾಲೆಯಿಂದ ಬರುತ್ತಿದ್ದ ಶಾಲಾ ಬಸ್ ಉಡುಪಿ ನಗರದ ಹೊರವಲಯದ ಪರಂಪಳ್ಳಿಯಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿದೆ.

ಕೂಡಲೇ ಸಮಯಪ್ರಜ್ಞೆಯಿಂದ ಬಸ್ ಅನ್ನು ರಸ್ತೆ ಬದಿಗೆ ಚಾಲಕ ಮೆಲ್ವಿನ್ ಕೊಂಡೊಯ್ದಿದ್ದು, ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.ಹೃದಯಾಘಾತಕ್ಕೊಳಗಾದ ಚಾಲಕ ಮೆಲ್ವಿನ್ ರನ್ನು ನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ ರಸ್ತೆ ಬದಿಗೆ ಸರಿದ ಪರಿಣಾಮ ಘಟನೆಯಲ್ಲಿ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

- Advertisement -

Latest News

error: Content is protected !!