Saturday, June 6, 2026
HomeWorldಮುತ್ತು ಆಗಿ ಪರಿವರ್ತನೆಗೊಂಡ ಪೆಚಿಯಮ್ಮಾಳ್; 30 ವರ್ಷಗಳ ಕಾಲ ಪುರುಷ ವೇಷ ಧರಿಸಿದ್ದ ಮಹಿಳೆ  

ಮುತ್ತು ಆಗಿ ಪರಿವರ್ತನೆಗೊಂಡ ಪೆಚಿಯಮ್ಮಾಳ್; 30 ವರ್ಷಗಳ ಕಾಲ ಪುರುಷ ವೇಷ ಧರಿಸಿದ್ದ ಮಹಿಳೆ  

- Advertisement -
- Advertisement -

ಚನ್ನೈ: ತಾಯಿಯಾದವಳು ತಂದೆ ಪ್ರೀತಿಯನ್ನು ನೀಡಿ ಮಕ್ಕಳನ್ನು ಬೆಳೆಸುವುದನ್ನು ನೋಡಿರಬಹುದು. ಆದರೆ ಇಲ್ಲಿ 30 ವರ್ಷಗಳ ಕಾಲ ಮಹಿಳೆಯೊಬ್ಬರು ಏಕಾಂಗಿಯಾಗಿ ತನ್ನ ಮಗಳನ್ನು ಬೆಳೆಸುವ ಉದ್ದೇಶದಿಂದ, ಪುರುಷ ವೇಷ ಧರಿಸಿ ಜೀವನ ನಡೆಸಿರುವ ಘಟನೆಯು ತಮಿಳುನಾಡಿನ ತೂತು ಕುಡಿ ಜಿಲ್ಲೆಯಲ್ಲಿ ನಡೆದಿದೆ. 

ಹೌದು 30 ವರ್ಷಗಳ ಹಿಂದೆ ತಮಿಳುನಾಡಿನ ಪೆಚಿಯಮ್ಮಾಳ್ ಎಂಬವರು ಮದುವೆಯಾದ ಕೆಲ ದಿನದಲ್ಲೇ ಹೃದಯಾಘಾತದಿಂದ ಗಂಡನನ್ನು ಕಳೆದುಕೊಂಡಿದ್ದು, ಬಳಿಕ ಹೆಣ್ಣು ಮಗುವಿಗೆ ಜನ್ಮನೀಡಿದರು. ನಂತರದ ದಿನಗಳಲ್ಲಿ ಹೊಟ್ಟೆಪಾಡಿಗೆ ಕೆಲಸ ಮಾಡಲು ಪ್ರಾರಂಭಿಸಿದ ಪೆಚಿಯಮ್ಮಾಳ್ ಕಿರುಕುಳವನ್ನು ಅನುಭವಿಸಿದ್ದರು. ಈ ಘಟನೆಗಳು ಆಕೆಯನ್ನು ಪುರುಷನಂತೆ ಪರಿವರ್ತನೆವೊಂದಲು ಪ್ರೇರೇಪಿಸಿದ್ದು, ಮಗಳನ್ನು ಚೆನ್ನಾಗಿ ಬೆಳೆಸುವ ಉದ್ದೇಶದಿಂದ ಪೆಚಿಯಮ್ಮಾಳ್ ಮುತ್ತು ಆಗಿ ಪರಿವರ್ತನೆಗೊಂಡರು. 

ಕಳೆದ ಮೂರು ದಶಕಗಳಿಂದ ಚೆನ್ನೈನ ಹೋಟೆಲು, ಚಹಾ ಅಂಗಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸಮಾಡಿರುವ ಅವರನ್ನು ತಮಿಳುನಾಡಿನ ಪುರುಷನ ಸಾಂಪ್ರದಾಯಿಕ ‘ಅನ್ನಾಚಿ’ ಹೆಸರಿನೊಂದಿಗೆ ಕರೆಯಲಾಗುತ್ತಿತ್ತು. 

‘ಪೇಂಟರ್ ವೃತ್ತಿಯಿಂದ ಹಿಡಿದು ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದು, ತನ್ನ ಮಗಳ ಸುರಕ್ಷಿತ ಜೀವನವನ್ನು ರೂಪಿಸುವ ಸಲುವಾಗಿ ಪ್ರತಿ ಪೈಸೆಯನ್ನು ಕೂಡಾ ಉಳಿಸಿಕೊಂಡಿದ್ದೇನೆ’ ಎನ್ನುತ್ತಾರೆ ಪೆಚಿಯಮ್ಮಾಳ್.  ಇತ್ತಿಚೆಗಷ್ಟೇ ಮುತ್ತು ಎನ್ನುವ ಹೆಸರು  ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿಯೂ ನಮೂದಿಸಲಾಗಿದೆ ಎಂದಿದ್ದಾರೆ. 

- Advertisement -

Latest News

error: Content is protected !!