Thursday, June 4, 2026
Homeತಾಜಾ ಸುದ್ದಿಮಂಗಳೂರು: ಪ್ರವೀಣ್‌ ನೆಟ್ಟಾರು ಸ್ಮರಣಾರ್ಥ ಬಿಲ್ಲವ ಸಂಘದ ವತಿಯಿಂದ ಬಡವರಿಗೆ ಮನೆ ನಿರ್ಮಾಣ

ಮಂಗಳೂರು: ಪ್ರವೀಣ್‌ ನೆಟ್ಟಾರು ಸ್ಮರಣಾರ್ಥ ಬಿಲ್ಲವ ಸಂಘದ ವತಿಯಿಂದ ಬಡವರಿಗೆ ಮನೆ ನಿರ್ಮಾಣ

- Advertisement -
- Advertisement -

ಮಂಗಳೂರು: ಪ್ರವೀಣ್‌ ನೆಟ್ಟಾರು ಸ್ಮರಣಾರ್ಥ ದ.ಕ.ಜಿಲ್ಲೆಯ 14 ಬಡ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಬಿಲ್ಲವ ಸಮುದಾಯದ ಮುಖಂಡ ಜಯಂತ ನಡುಬೈಲು ಮತ್ತು ಬಿಲ್ಲವ ಬ್ರಿಗೇಡ್‌ ಕೇಂದ್ರೀಯ ಮಂಡಳಿಯ ಸ್ಥಾಪಕ ಅವಿನಾಶ್‌ ಸುವರ್ಣ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವೀಣ್‌ ಕುಟುಂಬಕ್ಕೆ ಬಿಲ್ಲವ ಸಂಘದ ವತಿಯಿಂದ ಮನೆ ನಿರ್ಮಿಸಿಕೊಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದ್ರೆ ನಳಿನ್‌ ಕುಮಾರ್‌ ಕಟೀಲ್‌ ಅವರು ಪ್ರವೀಣ್‌ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಕಾರ್ಯಯೋಜನೆ ರೂಪಿಸಿರುವ ಹಿನ್ನಲೆಯಲ್ಲಿ ಬಿಲ್ಲವ ಸಂಘದ ಹಣದಿಂದ 14 ಬಡ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

- Advertisement -

Latest News

error: Content is protected !!