Thursday, June 25, 2026
Homeಕರಾವಳಿನಾಲ್ಕೂರು: 15ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ನಾಲ್ಕೂರು: 15ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿದ್ದ ನಾಲ್ಕೂರು ಗ್ರಾಮದ 15 ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಘೋಷಣೆಯಾದ ಬಳಿಕ ನಾಲ್ಕೂರು ಗ್ರಾಮದಲ್ಲಿ ಅತಿದೊಡ್ಡ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಕಾಂಗ್ರೆಸ್‌ ಕಾರ್ಯಕರ್ತರಾದ ನಾಲ್ಕೂರು ಗ್ರಾಮದ ವಿಠಲ್ ಪೂಜಾರಿ, ದಿನೇಶ್ ಪೂಜಾರಿ ಕುದ್ರೊಟ್ಟು, ದುಗ್ಗಯ್ಯ ಪೂಜಾರಿ ಹುಂಬೆಜೆ, ನೋಣಯ್ಯ ಪೂಜಾರಿ ಖಂಡಿಗ, ಜಗದೀಶ್ ಪೂಜಾರಿ ಕುದ್ರೊಟ್ಟು, ಹರೀಶ್ ಪೂಜಾರಿ ಕುದ್ರೊಟ್ಟು, ಕೊರಗಪ್ಪ ಪೂಜಾರಿ ಹುಂಬೆಜಲ್ಕೆ, ಯಶೋಧ  ಖಂಡಿಗ, ಮಾಧವ ಪೂಜಾರಿ ಖಂಡಿಗ, ಸುಕೇಶ್ ಪೂಜಾರಿ ಹುಂಬೆಲಕ್ಕೆ, ಅನಿಸಿತ್ ಪೂಜಾರಿ ಹುಂಬೆಜೆ, ನಿಶಾಂತ್ ಪೂಜಾರಿ ಹುಂಬೆಜೆ, ಶ್ರೀಕಾಂತ್ ಪೂಜಾರಿ ಖಂಡಿಗ ಅವರು ತಮ್ಮ ಕುಟುಂಬ ಹಾಗೂ ಹಿತೈಶಿಗಳೊಂದಿಗೆ ಶಾಸಕ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

- Advertisement -

Latest News

error: Content is protected !!